ಪನ್ನೀರ್ ಬಿರಿಯಾನಿಯಲ್ಲಿ “ಚಿಕನ್ ತುಂಡು” | ಧಾರ್ಮಿಕ ನಂಬಿಕೆಗೆ ಘಾಸಿಯಾಗಿದೆ ಎಂದ ಗ್ರಾಹಕ – ಝೋಮೆಟೋ ಹೇಳಿದ್ದೇನು ಗೊತ್ತಾ?

ಪುಣೆಯ ರೆಸ್ಟೋರೆಂಟ್‌ನಿಂದ ಝೊಮಾಟೊ ಮೂಲಕ ಆರ್ಡರ್ ಮಾಡಿದ ಪನೀರ್ ಬಿರಿಯಾನಿಯ ಪ್ಲೇಟ್‌ನಲ್ಲಿ ಚಿಕನ್ ತುಂಡು ಸಿಕ್ಕಿದ್ದರಿಂದ ತನ್ನ “ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ” ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

X (ಹಿಂದೆ ಟ್ವಿಟರ್) ನಲ್ಲಿ ಪಂಕಜ್ ಎಂಬ ವ್ಯಕ್ತಿ ಈ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ.

“PK ಬಿರಿಯಾನಿ ಹೌಸ್ ಕರ್ವೇ ನಗರ ಪುಣೆ ಮಹಾರಾಷ್ಟ್ರದಿಂದ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದೇನೆ. ಅದರಲ್ಲಿ ಚಿಕನ್ ಪೀಸ್ ಸಿಕ್ಕಿದೆ (ನಾನು ಸಸ್ಯಾಹಾರಿ) ನನಗೆ ಈಗಾಗಲೇ ಮರುಪಾವತಿ ಮಾಡಿದ್ದಾರೆ. ಆದರೆ ನಾನು ಧಾರ್ಮಿಕ ವ್ಯಕ್ತಿಯಾಗಿರುವುದರಿಂದ ಇದು ಪಾಪವಾಗಿದೆ. ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ.” ಎಂದುಅವರ ವೈರಲ್ ಪೋಸ್ಟ್ ಉಲ್ಲೇಖಿಸಿದೆ.

ಈ ಘಟನೆಯ ನಂತರ Zomato ಪೋಸ್ಟ್‌ಗೆ ಪ್ರತಿಕ್ರಿಯಿಸಿ, “ಹಾಯ್ ಪಂಕಜ್, ನಾವು ಯಾರ ಭಾವನೆಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಹೆಚ್ಚಿನ ಆದ್ಯತೆಯಾಗಿದೆ. ದಯವಿಟ್ಟು ನಿಮ್ಮ ಆರ್ಡರ್ ಐಡಿ ಅಥವಾ ನೋಂದಾಯಿತ ಫೋನ್ ಸಂಖ್ಯೆಯನ್ನು DM ಮೂಲಕ ಹಂಚಿಕೊಳ್ಳಿ ಪರಿಶೀಲಿಸುತ್ತೇವೆ” ಎಂದು ಉತ್ತರಿಸಿದೆ.

Latest Indian news

Popular Stories