ಬಿಜಾಪುರ ಜಿಲ್ಲಾ ಆಫಸೆಟ್ ಪ್ರಿಂಟರ್ಸ ಅಸೋಯಿಯೇಶನ್ ದಿಂದ ಗಾಂಧಿ – ಶಾಸ್ತ್ರಿ ಜಯಂತಿ ಆಚರಣೆ

WhatsApp Image 2023 10 02 at 01.43.23 Featured Story, State News, Vijayapura
ವಿಜಯಪುರ: ಬಿಜಾಪುರ ಜಿಲ್ಲಾ ಆಫಸೆಟ್ ಪ್ರಿಂಟರ್ಸ್ ಅಸೋಸಿಯೇಶನ್ ವತಿಯಿಂದ ನಗರದ ಶಾಪೇಟೆಯಲ್ಲಿರುವ ಅಸೋಸಿಯೇಶನ್ ಕಚೇರಿಯಲ್ಲಿ ಸೋಮವಾರ ಮಹಾತ್ಮಗಾಂಧೀಜಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿಜಿ ಜಯಂತಿ ಅಂಗವಾಗಿ ಇಬ್ಬರೂ ಮಹನೀಯರ ಭಾವಚಿತ್ರಕ್ಕೆ ಗೌರವನ ನಮನ ಸಲ್ಲಿಸುವ ಮೂಲಕ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಅ.2ರ ಸೋಮವಾರ ಬೆಳಿಗ್ಗೆ 8 ಗಂಟೆಗೆ ಸಂಘದ ಕಚೇರಿಯಲ್ಲಿ ಆಯೋಜಿಸಲಾದ ಜಯಂತಿ ಕಾರ್ಯಕ್ರಮದಲ್ಲಿ ಅಸೋಸಿಯೇಶನ್ ಅಧ್ಯಕ್ಷರಾದ ಆನಂದ ಬಗಾದಿ ಅವರು ಮಾತನಾಡಿ,ಭಾರತವನ್ನು ಪರಕೀಯರ ಗುಲಾಮಗಿರಿಯಿಂದ ಮುಕ್ತಿಗೊಳಿಸಿ ಸ್ವಾತಂತ್ರ್ಯ ದೊರಕಿಸಿಕೊಡುವದರಲ್ಲಿ ಮುಖ್ಯವಾಗಿ ಶಾಂತಿ ಮತ್ತು ಅಹಿಂಸಾ ಮಾರ್ಗವನ್ನು ಅನುಸರಿಸಿ ಹೋರಾಟ ಮಾಡಿದ ಮಹಾತ್ಮಾ ಗಾಂಧಿಜಿ ಮತ್ತು ಭಾರತದ ದ್ವಿತೀಯ ಪ್ರಧಾನಿಯಾಗಿ ಸದೃಢ ಭಾರತವನ್ನು ಮಾರ್ಪಾಡಿಸಲು ಶ್ರಮವಹಿಸಿದ ನಾಯಕರಾದ ಲಾಲ ಬಹಾದ್ದೂರ ಶಾಸ್ತ್ರಿಜಿವರು ಎರಡು ಅಪರೂಪದ ರತ್ನಗಳು ಎಂದು ಹೇಳಿದರು.
ಅಸೋಸಿಯೇಶನ್ ಸದಸ್ಯರಾದ ರವೀಂದ್ರ ಕುಲಕರ್ಣಿ ಅವರು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯ, ಅಹಿಂಸೆಯಿಂದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿಜಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಸೋಸಿಯೇಶನ್ ಸದಸ್ಯರಾದ ಪ್ರಕಾಶ ಮಠ ಅವರು ಮಾತನಾಡಿ, ಮಹಾತ್ಮ ಗಾಂಧಿಜಿ ಯವರು ಸ್ವದೇಶಿ ವಸ್ತುಗಳ ಬಳಕೆ, ಸ್ವಚ್ಛ ಭಾರತ, ವ್ಯಸನಮುಕ್ತ ಭಾರತ ಬಗ್ಗೆ ಕೈಗೊಂಡ ವಿಚಾರಗಳು ಮತ್ತು ಸಂಘ ಸಂಸ್ಥೆಗಳ ಪರವಾಗಿ ಇರುವ ಗಾಂಧಿಜಿಯವರ ಒಲವುಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿಗಳಾದ ಶಿವಮೂರ್ತಿ ಗೊಳಸಂಗಿಮಠ, ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಆಲಗೂರ, ನಿರ್ದೇಶಕರಾದ ವಸಂತ ನಾಯಕರ, ಮಹಾಂತೇಶ ಹಿರೇಮಠ, ಶಿವಾನಂದ ಗುದ್ದಿ, ಸಂಗಮೇಶ ಹಿರೇಮಠ, ಹಾಗೂ ದಸ್ಯರಾದ ಈರಣ್ಣ ಅಣೆಪ್ಪನವರ, ಗೌತಮ ಪಾಟೀಲ, ಬಸವರಾಜ ಗೋಳಸಂಗಿಮಠ, ಮಲ್ಲಿಕಾರ್ಜುನ ಯರನಾಳ, ಸಂತೋಷ ಶ್ರೀಶೈಲಪ್ಪಗೋಳ ಹಾಗೂ ಮುದ್ರಣ ಬಾಂಧವರು ಉಪಸ್ಥಿತರಿದ್ದು ಗೌರವ ಸಲ್ಲಿಸಿದರು.

Latest Indian news

Popular Stories