ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆದ್ದರೆ ಬಾಲಿವುಡ್​ಗೆ ಗುಡ್​ಬೈ: ಕಂಗನಾ ರಣಾವತ್

ಲೋಕಸಭಾ ಚುನಾವಣೆ(Lok Sabha Election)ಯಲ್ಲಿ ಗೆದ್ದರೆ ಬಾಲಿವುಡ್​ನಿಂದ ಹೊರಬರುವುದಾಗಿ ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್(Kangana Ranaut) ಹೇಳಿದ್ದಾರೆ.

ಕಂಗನಾ ರಣಾವತ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ರಾಜಕೀಯದ ಮೊದಲ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಇದೀಗ ವೈರಲ್ ಆಗುತ್ತಿರುವ ಕಂಗನಾ ಹೇಳಿಕೆಯಲ್ಲಿ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್​ನಿಂದ ಹೊರಬರುವುದಾಗಿ ಹೇಳಿದ್ದಾರೆ.

ಕಳೆದ ಮಂಗಳವಾರ ಕಂಗನಾ ಚುನಾವಣೆಗೆ ಮಂಡಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಸಂಪೂರ್ಣ ಸಮಯವನ್ನು ಪ್ರಚಾರಕ್ಕಾಗಿ ಮೀಸಲಿಟ್ಟಿದ್ದಾರೆ. ಆಜ್​ತಕ್​ಗೆ ನೀಡಿದ್ದ ಸಂದರ್ಶನದಲ್ಲಿ, ಕಂಗನಾ ಮಂಡಿಯನ್ನು ಗೆದ್ದರೆ ಮುಂದಿನ ಯೋಜನೆಗಳೇನು ಎಂದು ಕೇಳಿದಾಗ, ನನಗೆ ಚಲನಚಿತ್ರ ನಿರ್ಮಾಪಕರು ಸಾಕಷ್ಟು ಮಂದಿ ಹೇಳಿದ್ದಾರೆ ನೀನು ಉತ್ತಮ ನಟಿ, ರಾಜಕೀಯಕ್ಕೆ ಹೋಗಬೇಡಿ ಇಲ್ಲೇ ಇರು ಎಂದು ಆದರೆ ನಾನು ಚುನಾವಣೆಯಲ್ಲಿ ಗೆದ್ದರೆ ಚಿತ್ರರಂಗದಿಂದ ಹೊರಬರುತ್ತೇನೆ ಎಂದರು.

ಕಂಗನಾ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ.ಹಿಮಾಚಲ ಪ್ರದೇಶದಲ್ಲಿ ಮತದಾನದ ಮೊದಲು, ನಟಿ ತನ್ನ 91 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬಹಿರಂಗಪಡಿಸಿದರು. ಇದರಲ್ಲಿ ಆಭರಣಗಳು, ಕಾರುಗಳು ಮತ್ತು ಸ್ಥಿರ ಆಸ್ತಿಗಳು ಸೇರಿವೆ. ಆಕೆಯ ಸಾಲವೂ 17 ಕೋಟಿ ರೂ. ಇದೆ.

ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಕಂಗನಾ ಅವರು 28.7 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿಯನ್ನು ಹೊಂದಿದ್ದಾರೆ ಮತ್ತು 62.9 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ ಎಂಬ ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆ. ತನು ವೆಡ್ಸ್ ಮನು ನಟಿ ದೇಶಾದ್ಯಂತ ಆಸ್ತಿ ಹೊಂದಿದ್ದು, ಮುಂಬೈನಲ್ಲಿ 16 ಕೋಟಿ ರೂಪಾಯಿ ಮೌಲ್ಯದ ಮೂರು ಮನೆಗಳು ಮತ್ತು 15 ಕೋಟಿ ರೂಪಾಯಿ ಮೌಲ್ಯದ ಮನಾಲಿಯಲ್ಲಿ ಬಂಗಲೆ ಇದೆ.

ಹೆಚ್ಚುವರಿಯಾಗಿ, ಅವರು ಚಂಡೀಗಢದಲ್ಲಿ ನಾಲ್ಕು ಆಸ್ತಿಗಳನ್ನು ಹೊಂದಿದ್ದಾರೆ, ಮುಂಬೈನಲ್ಲಿ ವಾಣಿಜ್ಯ ಆಸ್ತಿ ಮತ್ತು ಮನಾಲಿಯಲ್ಲಿ ವಾಣಿಜ್ಯ ಕಟ್ಟಡವನ್ನು ಹೊಂದಿದ್ದಾರೆ. ಹಿಮಾಚಲಪ್ರದೇಶದಲ್ಲಿ ಜೂನ್​ 1ರಂದು ಮತದಾನ ನಡೆಯಲಿದೆ. ಕಂಗನಾ ಕೇವಲ 12ನೇ ತರಗತಿ ಪಾಸಾಗಿದ್ದಾರೆ, ಗ್ಯಾಂಗ್​ಸ್ಟರ್ ಚಿತ್ರದ ಮೂಲಕ ಕಂಗನಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

Latest Indian news

Popular Stories