ವಕ್ಫ್ ಹೆಸರಲ್ಲಿ ಕೋಮುದ್ವೇಷ ಹರಡಿಸುವವರ ವಿರುದ್ಧ ಸರಕಾರ ಕಠಿಣ ಕ್ರಮ ಜರಗಿಸಬೇಕು : ವೆಲ್ಫೇರ್ ಪಾರ್ಟಿ


ವಕ್ಪ್ ಹೆಸರಲ್ಲಿ ಕೋಮುಪ್ರಚೋದಿತ ಹೇಳಿಕೆ ನೀಡಿ ರಾಜ್ಯದಲ್ಲಿ ಕೋಮುದ್ವೇಷ ಹರಡಿಸುತ್ತಿರುವ ರಾಜಕಾರಣಿಗಳ ವಿರುದ್ಧ ಸರಕಾರ ಕಠಿಣ ಕ್ರಮ ವಹಿಸಬೇಕೆಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಆಗ್ರಹಿಸಿದ್ದಾರೆ.


ಚುನಾವಣೆ ಆಸನ್ನವಾದ ಕೂಡಲೇ ಕೋಮು ಸೂಕ್ಷ್ಮ ವಿಚಾರಗಳನ್ನು ತನ್ನ ಅಸ್ತ್ರ ವನ್ನಾಗಿ ಬಳಸುವ ಬಿಜೆಪಿಯ ಎಂದಿನ ಚಾಳಿಯನ್ನು ಇಲ್ಲಿಯೂ ಮುಂದುವರಿಸಿದೆ. ಅಲ್ಪ ಸಂಖ್ಯಾತ ಸಮುದಾಯದ ವಿರುದ್ದ ರೈತರನ್ನು ಎತ್ತಿಕಟ್ಟುವ ಕಾರ್ಯ ನಡೆದಿದೆ.ಇದರ ಪರಿಣಾಮವಾಗಿ
ಹಾವೇರಿ ಜಿಲ್ಲೆಯ ಸಮಣೂರಿನ ಕಡಗೋಳ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮನೆ ಅಸ್ತಿಗಳ ಮೇಲೆ ದಾಳಿ ನಡೆದಿದೆ.ಬಿಜೆಪಿ ಅಧಿಕಾರದಲ್ಲಿ ಇರುವಾಗಲೇ ವಕ್ಫ್ ಅದಾಲತ್ ಗಳು ನಡೆದಿದ್ದುವು. 2006ರಲ್ಲಿಬಿಜೆಪಿ ಜೆಡಿ ಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಚಿಕ್ಕಮಗಳೂರು ಗಾವನ ಹಳ್ಳಿ ಕಡೂರಳ್ಳಿಯ ನಾಲ್ಕು ಪ್ರಕರಣಗಳಲ್ಲಿ ರೈತರ ಭೂಮಿಯನ್ನು ವಕ್ಫ್ ಖಾತೆಗೆ ಬದಲಾಯಿಸಲಾಗಿದೆ.

2003 2013ರಮದ್ಯೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಮುಖ್ಯ ಮಂತ್ರಿಗಳಾಗಿದ್ದಾಗ ಏಳು ಆಸ್ತಿಗೆ ವಕ್ಫ್ ಎಂದು ನಮೂದು ಮಾಡಲಾಗಿದೆ. ಇದೇ ರೀತಿ 2019/23 ರ ಅವಧಿಯಲ್ಲಿ ಮಾಡಿದ. ಹೀಗೆ ಅನೇಕ ಉದಾಹರಣೆಗಳಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಹೀಗಿರುವಾಗ ಸುಳ್ಳು
ವದಂತಿಗಳನ್ನು ಹಬ್ಬಿಸಿ ಗಲಬೆಗೆ ಪ್ರಚೋದನೆ ನೀಡಿ ರಾಜಕೀಯ ಲಾಭ ಪಡೆಯುವ ಹುನ್ನಾರ ಬಿಜೆಪಿ ಮಾಡುತ್ತಿದೆ,ಇದು ಸಮಾಜದ ಸ್ವಾಸ್ಥ್ಯ ಕೆಡಿಸುವ ಷಡ್ಯಂತ್ರವಾಗಿದೆ. ಕದಡಿದ ನೀರಲ್ಲಿ ಮೀನು ಹಿಡಿಯುವ ಕಾಯಕವನ್ನು ಬಿಜೆಪಿ ನಿಲ್ಲಿಸಬೇಕು ಎಂದು ಆಗ್ರಹಿಸಿದ ಅವರು ಜನರು ಇಂತಹ ವದಂತಿಗಳಿಗೆ ಕಿವಿಗೊಟ್ಟು ಪ್ರಚೋದಿತಗೊಂಡು ಬಲಿಪಶುಗಳಾಗಬಾರದು ಯಂದು ಅವರು ಮನವಿ ಮಾಡಿದ್ದಾರೆ.

Latest Indian news

Popular Stories