ಭಾರತದ ಅರ್ಥಿಕತೆಯಲ್ಲಿನ ಸಮಸ್ಯೆಗಳನ್ನು ಸರಿ ಪಡಿಸಬೇಕು; ಬಲವಾದ ಆರ್ಥಿಕ ಬೆಳವಣಿಗೆಯ ಸುತ್ತಲಿನ “ಹೈಪ್”ನ್ನು ನಂಬುವ ದೊಡ್ಡ ತಪ್ಪು ಮಾಡಬಾರದು – ಆರ್.ಬಿ.ಐ ಮಾಜಿ ಗವರ್ನರ್ ರಘುರಾಮ್ ರಾಜನ್

ಭಾರತವು ತನ್ನ ಬಲವಾದ ಆರ್ಥಿಕ ಬೆಳವಣಿಗೆಯ ಸುತ್ತಲಿನ “ಹೈಪ್”ನ್ನು ನಂಬುವ ದೊಡ್ಡ ತಪ್ಪನ್ನು ಮಾಡುತ್ತಿದೆ ಏಕೆಂದರೆ ದೇಶವು ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಗಮನಾರ್ಹವಾದ ರಚನಾತ್ಮಕ ಸಮಸ್ಯೆಗಳನ್ನು ಸರಿಪಡಿಸಬೇಕಾಗಿದೆ ಎಂದು ಆರ್.ಬಿ.ಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಚುನಾವಣೆಯ ನಂತರ ಹೊಸ ಸರ್ಕಾರವು ಎದುರಿಸಬೇಕಾದ ದೊಡ್ಡ ಸವಾಲೆಂದರೆ ಉದ್ಯೋಗಿಗಳ ಶಿಕ್ಷಣ ಮತ್ತು ಕೌಶಲ್ಯಗಳನ್ನು ಸುಧಾರಿಸುವುದು ಎಂದು ರಾಜನ್ ಸಂದರ್ಶನವೊಂದರಲ್ಲಿ ಹೇಳಿದರು. ಅದನ್ನು ಸರಿಪಡಿಸದೆ ಭಾರತವು ತನ್ನ ಯುವ ಜನಸಂಖ್ಯೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು. ಯಾಕೆಂದರೆ ದೇಶದಲ್ಲಿ 1.4 ಶತಕೋಟಿ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂಬ ವಿಚಾರದ ಮೇಲೆ ಬೆಳಕು ಚೆಲ್ಲಿದರು.

“ಭಾರತವು ಮಾಡಬಹುದಾದ ದೊಡ್ಡ ತಪ್ಪು ಎಂದರೆ ಪ್ರಚಾರವನ್ನು ನಂಬುವುದು” ಎಂದು ಅವರು ಹೇಳಿದರು. “ಹೈಪ್” ನಿಜವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಇನ್ನೂ ಹಲವು ವರ್ಷಗಳ ಕಠಿಣ ಪರಿಶ್ರಮವನ್ನು ಮಾಡಬೇಕಾಗಿದೆ. ಒಂದು ಅಲೆ ಸೃಷ್ಟಿಸಿ ರಾಜಕಾರಣಿಗಳು ನೀವು ನಂಬಬೇಕೆಂದು ಬಯಸುತ್ತಾರೆ. ಏಕೆಂದರೆ ನಾವು ಬಂದಿದ್ದೇವೆ ನೀವು ನಂಬಬೇಕೆಂದು ಅವರು ಬಯಸುತ್ತಾರೆ. ಆದರೆ ಭಾರತವು ಆ ನಂಬಿಕೆಗೆ ಬಲಿಯಾಗುವುದು ಗಂಭೀರ ಪ್ರಮಾದ ಎಂದು ಅವರು ಹೇಳಿದರು.

2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯನಲ ಕುರಿತು ಪ್ರತಿಕ್ರಿಯಿಸಿ, “ನಿಮ್ಮ ಅನೇಕ ಮಕ್ಕಳು ಹೈಸ್ಕೂಲ್ ಶಿಕ್ಷಣವನ್ನು ಹೊಂದಿಲ್ಲದಿದ್ದರೆ, ಡ್ರಾಪ್-ಔಟ್ ದರಗಳು ಹೆಚ್ಚಾಗುತ್ತಿರುವಾಗ ಈ ಕುರಿತು ಮಾತನಾಡುವುದೇ “ಅಸಂಬದ್ಧ” ಎಂದು ಹೇಳಿದರು.

“ನಾವು ಬೆಳೆಯುತ್ತಿರುವ ಉದ್ಯೋಗಿಗಳನ್ನು ಹೊಂದಿದ್ದೇವೆಮ ಆದರೆ ಅವರು ಉತ್ತಮ ಉದ್ಯೋಗಗಳಲ್ಲಿ ಉದ್ಯೋಗದಲ್ಲಿದ್ದರೆ ಮಾತ್ರ ಲಾಭಾಂಶವಾಗಿದೆ” ಎಂದು ಅವರು ಹೇಳಿದರು. ಭಾರತವು ಮೊದಲು ಹೆಚ್ಚು ಜನರನ್ನು ಉದ್ಯೋಗಿಗಳನ್ನಾಗಿ ಮಾಡಬೇಕು. ಅದಕ್ಕಾಗಿ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ಅವರು ಹೇಳಿದರು.

ಸುಸ್ಥಿರ ಆಧಾರದ ಮೇಲೆ 8% ಬೆಳವಣಿಗೆಯನ್ನು ಪಡೆಯಲು ಭಾರತವು ಹೆಚ್ಚಿನ ಕೆಲಸವನ್ನು ಮಾಡಬೇಕಾಗಿದೆ ಎಂದು ರಾಜನ್ ಹೇಳಿ ಇತ್ತೀಚಿನ ಪೊಳ್ಳು ಘೋಷಣೆಗಳನ್ನೆಲ್ಲ ನಿರಾಕರಿಸಿದ್ದಾರೆ.

Latest Indian news

Popular Stories