ಬಿಟ್ಟು ಬಜರಂಗಿಯನ್ನು ಅಟ್ಟಾಡಿಸಿ ಸೆರೆ ಹಿಡಿದ ಪೊಲೀಸರು

ಹರಿಯಾಣದ ನುಹ್ ಮತ್ತು ಗುರುಗ್ರಾಮ್‌ನಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಜರಂಗದಳದ ಸದಸ್ಯ ಮತ್ತು ಸ್ವಯಂ ಘೋಷಿತ ಗೋರಕ್ಷಕ ಬಿಟ್ಟು ಬಜರಂಗಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 

ಪೊಲೀಸರು ದೊಣ್ಣೆ ಮತ್ತು ಪಿಸ್ತೂಲುಗಳೊಂದಿಗೆ ಶಸ್ತ್ರಸಜ್ಜಿತರಾಗಿ ಆತನ ಮನೆಯ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ.

ಕನಿಷ್ಠ 15 ರಿಂದ 20 ಪೊಲೀಸ್ ಅಧಿಕಾರಿಗಳು ಲುಂಗಿ ಧರಿಸಿದ ಸ್ವಯಂ ಘೋಷಿತ ಗೋರಕ್ಷಕನನ್ನು ಅಟ್ಟಾಡಿಸಿ ಸೆರೆ ಹಿಡಿದಿದ್ದಾರೆ ಎಂದು ಸ್ಥಳೀಯರು ಹೇಳಿರುವ ಕುರಿತು ಡಿ.ಎನ್.ಎ ಮಾಧ್ಯಮ ವರದಿ ಮಾಡಿದೆ. ಫರಿದಾಬಾದ್‌ನ ದಬುವಾ ಬೀದಿಗಳಲ್ಲಿ ಮಂಗಳವಾರ ಮಧ್ಯಾಹ್ನ ಬೆನ್ನಟ್ಟಿದ ನಂತರ, ಪೊಲೀಸರು ಅಂತಿಮವಾಗಿ ಬಿಟ್ಟುವನ್ನು ಬಂಧಿಸಿದರು. ಸಿಸಿಟಿವಿಯಲ್ಲೂ ದೃಶ್ಯ ಸೆರೆಯಾಗಿದೆ.

ಬಿಟ್ಟು ಬಜರಂಗಿ ಬಜರಂಗದಳದ ಕಾರ್ಯಕರ್ತ ಮತ್ತು ಸ್ವಯಂ ಘೋಷಿತ ಗೋರಕ್ಷಕ. ಆತ ಪ್ರಚೋದನಕಾರಿ ಭಾಷಣಕ್ಕೆ ಕುಖ್ಯಾತನಾಗಿದ್ದ.ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಿಟ್ಟುನ ನಿಜವಾದ ಹೆಸರು ರಾಜ್ ಕುಮಾರ್. ಅವನು ಫರಿದಾಬಾದ್‌ನ ಸ್ವಯಂ ಘೋಷಿತ ಗೋರಕ್ಷಕರಾಗಿದ್ದಾರೆ.  ಗೌ ರಕ್ಷಾ ಬಜರಂಗದಳದ ಫರಿದಾಬಾದ್ ಮುಖ್ಯಸ್ಥ.

Latest Indian news

Popular Stories