ಮಣಿಪುರ ಹಿಂಸಾಚಾರ: ತಂದೆ, ಮಗ ಸೇರಿದಂತೆ ಮೂವರ ಹತ್ಯೆ

ಗುವಾಹಟಿ: ಮಣಿಪುರದಲ್ಲಿ ನಡೆದ ಹಿಂಸಾಚಾರದ ಘಟನೆಯಲ್ಲಿ ಶನಿವಾರ ಮುಂಜಾನೆ ಬಿಷ್ಣುಪುರ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಗಳು ಮೂವರನ್ನು ಕೊಂದಿದ್ದಾರೆ. ಬಿಷ್ಣುಪುರ ಜಿಲ್ಲೆಯ ಉಖಾ ಟಂಪಕ್ ಪ್ರದೇಶದಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಆರಂಭದಲ್ಲಿ, ಸಾವಿಗೆ ನಿಖರವಾದ ಕಾರಣವನ್ನು ತಿಳಿದು ಬಂದಿರಲಿಲ್ಲ. ಆದರೆ, ಮೂವರನ್ನು ಹರಿತವಾದ ಆಯುಧಗಳಿಂದ ಹತ್ಯೆ ಮಾಡಲಾಗಿದೆ ಎಂದು ಮೂಲಗಳು ನಂತರ ತಿಳಿಸಿವೆ.

ಮೂವರ ಮನೆಗಳಿಗೆ ಕಾವಲು ಕಾಯುತ್ತಿದ್ದಾಗ ದಾಳಿ ನಡೆಸಲಾಗಿದೆ. ಮೃತರಲ್ಲಿ ತಂದೆ ಮತ್ತು ಮಗ ಸೇರಿದ್ದಾರೆ.

Latest Indian news

Popular Stories