ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದ ಶಾಲೆಯೊಂದರ ಶಿಕ್ಷಕರ ವಾಶ್ ರೂಂನ ಬಲ್ಬ್ ಸಾಕೆಟ್‌ನಲ್ಲಿ ಸ್ಪೈ ಕ್ಯಾಮೆರಾ ಇರಿಸಿದ್ದಕ್ಕಾಗಿ ಶಾಲೆಯ ನಿರ್ದೇಶಕರನ್ನು ಬಂಧಿಸಲಾಗಿದೆ.
ಕ್ಯಾಮರಾ ಇಟ್ಟು ನಿರ್ದೇಶಕ ತಮ್ಮ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಮೂಲಕ ವಾಶ್ ರೂಂಗೆ ಪ್ರವೇಶಿಸುವ ವ್ಯಕ್ತಿಗಳ ನೇರ ದೃಶ್ಯಗಳನ್ನು ವೀಕ್ಷಿಸುತ್ತಿದ್ದ. ಕ್ಯಾಮರಾ ಪತ್ತೆಯಾದ ತಕ್ಷಣ ಶಿಕ್ಷಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಘಟನೆಯು ನೋಯ್ಡಾದ ಸೆಕ್ಟರ್ 70 ರ ಪ್ಲೇ ಸ್ಕೂಲ್ ಆದ ಲರ್ನ್ ವಿತ್ ಫನ್‌ನಲ್ಲಿ ಸಂಭವಿಸಿದೆ. ಡಿಸೆಂಬರ್ 10 ರಂದು, ಶಿಕ್ಷಕರೊಬ್ಬರು ವಾಶ್‌ರೂಮ್‌ನ ಬಲ್ಬ್ ಹೋಲ್ಡರ್‌ನಲ್ಲಿ ಅಸಹಜವಾದದ್ದನ್ನು ಗಮನಿಸಿದ್ದಾರೆ. ಹೋಲ್ಡರ್‌ನಲ್ಲಿ ಮಸುಕಾದ ಬೆಳಕನ್ನು ಗಮನಿಸಿದ್ದರು. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕ್ಯಾಮರಾ ಪತ್ತೆಯಾಗಿದೆ. ಆಕೆ ಕೂಡಲೇ ಶಾಲೆಯ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಸಾಧನ ಇರುವುದನ್ನು ಖಚಿತಪಡಿಸಿದ್ದಾರೆ.
ನಂತರ ಶಿಕ್ಷಕಿ ಶಾಲೆಯ ನಿರ್ದೇಶಕ ನವನಿಷ್ ಸಹಾಯ್ ಮತ್ತು ಶಾಲೆಯ ಸಂಯೋಜಕರಾದ ಪಾರುಲ್ ಅವರಿಗೆ ವಿಷಯ ತಿಳಿಸಿದ್ದಾರೆ. ಆದಾಗ್ಯೂ, ಅವರು ಆರೋಪಗಳನ್ನು ನಿರಾಕರಿಸಿದರು. ಸಹಾಯ್ ಅಥವಾ ಪಾರುಲ್ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕಿ ಆರೋಪಿಸಿದ್ದಾರೆ.
ಶಿಕ್ಷಕಿಯ ದೂರಿನ ಮೇರೆಗೆ ನೋಯ್ಡಾದ ಕೇಂದ್ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶಕ್ತಿ ಮೋಹನ್ ಅವಸ್ತಿ ಅವರು ತನಿಖೆ ಆರಂಭಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ತೇದಾರಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿದೆ ಮತ್ತು ಅದನ್ನು ರೆಕಾರ್ಡ್ ಮಾಡದೆಯೇ ಲೈವ್-ಸ್ಟ್ರೀಮಿಂಗ್ ದೃಶ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ತನಿಖೆಯು ದೃಢಪಡಿಸಿತ್ತು
ನಂತರ ನಿರ್ದೇಶಕ ನವೀಶ್ ಸಹಾಯ್ ಅವರನ್ನು ಬಂಧಿಸಲಾಗಿದೆ. ಅವರೇ ಕ್ಯಾಮೆರಾ ಇಟ್ಟು ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದು 22 ಸಾವಿರ ರೂಪಾಯಿ ಕೊಟ್ಟು ಆನ್ಲೈನ್ ನಲ್ಲಿ ಕ್ಯಾಮರಾ ಖರೀದಿಸಿದ್ದ ಎನ್ನಲಾಗಿದೆ.