ಶಿರವಸ್ತ್ರ ಬ್ಯಾನ್ ಮಾಡಿದ ಮುಂಬೈ ಕಾಲೇಜಿನ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಮುಂಬೈ: ಕಾಲೇಜು ಆವರಣದಲ್ಲಿ ಹಿಜಾಬ್‌ಗಳು, ಬುರ್ಖಾಗಳು ಮತ್ತು ನಖಾಬ್‌ಗಳನ್ನು ಧರಿಸುವುದನ್ನು ನಿಷೇಧಿಸಿರುವ ನಗರ ಶಿಕ್ಷಣ ಸಂಸ್ಥೆಯೊಂದರ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ.

ಎನ್.ಜಿ.ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ವಿಜ್ಞಾನ ಪದವಿ ಕೋರ್ಸ್‌ನ ಎರಡನೇ ಮತ್ತು ಮೂರನೇ ವರ್ಷಕ್ಕೆ ದಾಖಲಾಗಿರುವ ಒಂಬತ್ತು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿಗಳಾದ ಎ.ಎಸ್. ಚಂದೂರ್ಕರ್ ಮತ್ತು ರಾಜೇಶ್ ಪಾಟೀಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದ್ದಾರೆ.

ಹೊಸ ಡ್ರೆಸ್ ಕೋಡ್ ನೀತಿಯು ತಮ್ಮ ಧರ್ಮ, ಗೌಪ್ಯತೆ ಮತ್ತು ಆಯ್ಕೆಯನ್ನು ಅಭ್ಯಾಸ ಮಾಡುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಮನವಿಯಲ್ಲಿ ಕಾಲೇಜಿನ ಕ್ರಮ “ನಿರಂಕುಶ, ಅಸಮಂಜಸ, ಕೆಟ್ಟ ಮತ್ತು ವಿಕೃತ” ಎಂದು ಹೇಳಿರುವುದಾಗಿ ವರದಿಯಾಗಿದೆ.

Latest Indian news

Popular Stories