ಅಕ್ಟೋಬರ್’ನಿಂದ ಹಿಬ್ಝುಲ್ಲಾ ಮಿಲಿಟೆಂಟ್ ಪಡೆ ಬಳಸಿದ್ದು ಕೇವಲ 5% ಶಸ್ತ್ರಾಸ್ತ್ರ – ಇಸ್ರೇಲ್ ಭವಿಷ್ಯಕ್ಕೆ ಲೆಬನಾನ್ ಗುಂಪು ಮಾರಕ ಎಂದ ಇಸ್ರೇಲ್ ಅಧಿಕಾರಿ!

ಲೆಬನಾನ್ ಮತ್ತು ಇಸ್ರೇಲ್’ನ ಗಡಿ ಪ್ರದೇಶದಲ್ಲಿ ಯುದ್ಧದ ಕಾರ್ಮೋಡ ತೇಲುತ್ತಿದೆ. ಅಕ್ಟೋಬರ್ 7, 2023 ರ ನಂತರ ಆರಂಭವಾದ ಹಮಾಸ್-ಇಸ್ರೇಲ್ ಯುದ್ಧದಲ್ಲಿ ಹಿಬ್ಝುಲ್ಲಾ ಕೂಡ ಎಂಟ್ರಿ ಹೊಡೆದಿದ್ದು ಇದೀಗ ಇಸ್ರೇಲ್ ಮಾಧ್ಯಮ ಒಂದು ದೊಡ್ಡ ರಹಸ್ಯ ಬಹಿರಂಗಪಡಿಸಿದೆ.

ಲೆಬನಾನ್’ನ ಬಂಡುಕೋರರ ಪಡೆ ಹಿಝ್ಬುಲ್ಲಾ ಇದುವರೆಗೆ ಬಳಸಿದ ಶಸ್ತ್ರಾಸ್ತ್ರ ಕೇವಲ 5%. ಅದು ಇಸ್ರೇಲ್’ನ ಮೇಲೆ ಪ್ರಯೋಗ ಮಾತ್ರ ನಡೆಸಿದೆ. ವಾಯು ದಾಳಿಯಿಂದ ರಕ್ಷಿಸಿಕೊಳ್ಳಲು ಇಸ್ರೇಲ್ ಕಟ್ಟಿಕೊಂಡಿರುವ “ಕ್ಷಿಪಣಿ ನಿಯಂತ್ರಕ” ಗಳನ್ನು ಬೇಧಿಸಲು ಹಲವು ಆಯಾಮಗಳಲ್ಲಿ ಶಸ್ತ್ರಾಸ್ತ್ರ ಬಳಸಿ ಪ್ರಯೋಗ ನಡೆಸುತ್ತಿದೆ. ಅದು ಇಸ್ರೇಲ್’ನ ದೌರ್ಬಲ್ಯ ಹುಡುಕುತ್ತಿದೆ ಎಂದು ವರದಿ ಬೆಳಕು ಚೆಲ್ಲಿದೆ.

ಇಸ್ರೇಲ್’ನ ವೈನೆಟ್ ವರದಿ ಪ್ರಕಾರ, ” ಇಸ್ರೇಲ್’ಗೆ ಲೆಬನಾನ್’ನ ಹಿಝ್ಬುಲ್ಲಾ ಗುಂಪು ಇದೀಗ ಅಪಾಯಕಾರಿ” ಎಂದು ಉಲ್ಲೇಖಿಸಿದೆ‌.

ಹಿಝ್ಬುಲ್ಲಾ ಕೂಡ ತಾನು ಕೇವಲ 5% ಶಸ್ತ್ರಾಸ್ತ್ರ ಬಳಕೆ ಮಾಡಿದ್ದು ಇಸ್ರೇಲ್’ನ ಐಡಿಎಫ್ ವ್ಯವಸ್ಥೆ ಬೇಧಿಸಲು ತಂತ್ರಗಾರಿಕೆ ಹುಡುಕುತ್ತಿರುವ ಕುರಿತು ಹೇಳಿ ಕೊಂಡಿದೆ. ಇಸ್ರೇಲ್ ಏರ್ ಡಿಫೆನ್ಸಿವ್ ಸಿಸ್ಟಮ್ ಬೇಧಿಸಿ ಪೂರ್ಣ ಪ್ರಮಾಣದ ದಾಳಿ ನಡೆಸಲು ಹಿಝ್ಬುಲ್ಲಾ ತಂತ್ರಗಾರಿಕೆ ನಡೆಸುತ್ತಿರುವ ಕುರಿತು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದಕ್ಕೆ ಸಾಕ್ಷಿಯೆಂಬಂತೆ ಹಿಝ್ಬುಲ್ಲಾ ಇಸ್ರೇಲ್ ಮೇಲೆ ದಾಳಿ ಮಾಡುವಾಗ ವಿವಿಧ ಆಯಾಮಗಳನ್ನು ಬಳಸಿ ಪರಿಶೀಲನೆ ನಡೆಸುತ್ತಿದ್ದು ಇದು ಪ್ರಯೋಗಾತ್ಮಾಕ ದಾಳಿ ಎನ್ನಲಾಗುತ್ತಿದೆ.

ಇಸ್ರೇಲ್ ಅಧಿಕಾರಿಯೊಬ್ಬರು ಮಾತನಾಡಿ, “ಹಿಝ್ಬುಲ್ಲಾದಿಂದ ಇಸ್ರೇಲ್’ಗೆ ” ಅಸ್ತಿತ್ವದ ಬೆದರಿಕೆ” ಇರುವ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಲೆಬನಾನ್ ದೊಡ್ಡ ದೇಶವಾಗಿದ್ದು ಸಂಪೂರ್ಣ ದೇಶದಲ್ಲಿ ಹಿಜ್ಬುಲ್ಲಾ ಹರಡಿಕೊಂಡಿರುವುದರಿಂದ ಇಸ್ರೇಲ್’ಗೆ ಆತಂಕ ತಪ್ಪಿದ್ದಲ್ಲ” ಎಂದು ಹೇಳಿದ್ದಾರೆ.

“ಇಸ್ರೇಲ್ ಸೈನ್ಯ ಸಣ್ಣದಾಗಿದ್ದು 20-50 ವರ್ಷದವರು ಸೈನ್ಯದಲ್ಲಿ ಇಲ್ಲದವರನ್ನು ಭರ್ತಿ ಮಾಡಿಕೊಳ್ಳಬೇಕು. ಆಗ ನಾವು ಮೂರು ಅಥವಾ ನಾಲ್ಕು ಡಿವಿಶನ್ ಮಾಡಬಹುದು. ನಂತರ ಮಾತನಾಡಬಹುದಾಗಿದೆ” ಎಂದು ಮೇಜರ್ ಜನರಲ್ ಗೆರ್ ಶಾನ್ ಹ್ಯಾಕೊಯ್ ಸಂದರ್ಶನದಲ್ಲಿ ಹೇಳಿದ್ದಾರೆ.

Latest Indian news

Popular Stories