ಬೆಂಗಳೂರು, ಫೆ.07: ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ವಲಯ ಅಂದ್ರೆ ಅದು ಹೋಟೆಲ್ ಉಧ್ಯಮ. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಹೋಟೆಲ್ಗಳು (Hotels) ಓಪನ್ ಆಗುತ್ತಿದ್ದಂತೆ ಉದ್ಯೋಗ ಸೃಷ್ಟಿಯು ಕೂಡ ಹೆಚ್ಚಳವಾಗುತ್ತಿದೆ.
ಈ ಮಧ್ಯೆ ಹೋಟೆಲ್ ಗಳನ್ನ ದಿನದ 24 ಗಂಟೆಗಳ ಕಾಲ ತೆರೆಯಲು ಅನುಮತಿ ಕೊಡುವಂತೆ ಹೋಟೆಲ್ ಅಸೋಸಿಯೇಷನ್ (Hotel Association) ಸರ್ಕಾರದ ಮುಂದೆ ಬೇಡಿಕೆ ಇಡುತ್ತಲೇ ಬಂದಿತ್ತು. ಆದರೆ ಹಿಂದಿನ ಸರ್ಕಾರವು ಇವರ ಬೇಡಿಕೆಯನ್ನ ಇಡೇರಿಸಿರಲಿಲ್ಲ. ಈ ಬಾರಿ ಕಾಂಗ್ರೆಸ್ ಸರ್ಕಾರ (Congress Government) ಇವರ ಬೇಡಿಕೆಯನ್ನ ಇಡೇರಿಸಲು ಮುಂದಾಗಿದೆ.
ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೂ ಕೆಲಸ ನಿರ್ವಹಿಸುವ ಜನರಿಗೆ ಸಧ್ಯ ಹೋಟೆಲ್ಗಳಲ್ಲಿ ಊಟಗಳೇನೋ ಸಿಗುತ್ತಿವೆ. ಆದರೆ ಮಧ್ಯರಾತ್ರಿಯ ಸಂಧರ್ಭದಲ್ಲಿ ಊಟ- ತಿಂಡಿ ಸರಿಯಾಗಿ ಸಿಗದೇ ಪರದಾಡುತ್ತಿರುವವರು ಸಾಕಷ್ಟು ಮಂದಿ ಇದ್ದಾರೆ. ಈ ಕಾರಣದಿಂದಾಗಿ ಹೋಟೆಲ್ ಅಸೋಸಿಯೇಷನ್ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯುವಂತೆ ಸರ್ಕಾರಕ್ಕೆ ಮನವಿಯನ್ನ ಸಲ್ಲಿಸುತ್ತಲೇ ಬಂದಿದೆ. ಆದರೆ ಈ ಹಿಂದಿನ ಬಿಜೆಪಿ ಸರ್ಕಾರ ಮಾತ್ರ ಇವರ ಬೇಡಿಕೆಗೆ ಸ್ಪಂದಿಸಿರಲಿಲ್ಲ. ಇದೀಗಾ ಕಾಂಗ್ರೆಸ್ ಸರ್ಕಾರ ಈ ಬೇಡಿಕೆಯನ್ನ ಇಡೇರಿಸುವ ಭರವಸೆ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಾರ್ಗಸೂಚಿಯನ್ನ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇನ್ನು, ದಿನದ 24 ಗಂಟೆಗಳ ಕಾಲ ಹೋಟೆಲ್ ಗಳನ್ನ ತೆರೆಯುವುದಕ್ಕೆ ಅನುಮತಿ ನೀಡುವುದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ರಾತ್ರಿ ಪಾಳಯದಲ್ಲಿ ಕೆಲಸ ಮಾಡಲು ಸಾಕಷ್ಟು ಯುವಕರು ಬರ್ತಾರೆ. ಅಲ್ಲದೇ ಇಂದಿಗೂ ರಾತ್ರಿ ವೇಳೆ ಪ್ರಯಾಣ ಮಾಡುವವರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸಧ್ಯ ಕೇರಳದಲ್ಲಿ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಅನುಮತಿ ಇದೆ. ಅದರಂತೆ ನಮ್ಮ ಸರ್ಕಾರಕ್ಕೂ ಬೇಡಿಕೆ ಇಟ್ಟಿದ್ದೀವಿ. ಸರ್ಕಾರ ಭರವಸೆ ಕೊಟ್ಟಿದೆ. ಆ ಭರವಸೆ ಕಾರ್ಯರೂಪಕ್ಕೆ ಬಂದಿದ್ದೆ ಆದಾಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದು ಹೋಟಲ್ ಮಾಲೀಕರು ಹೇಳಿದರು.
ದಿನದ 24 ಗಂಟೆಗಳ ಕಾಲ ಹೋಟೆಲ್ ಓಪನ್ ಮಾಡಲು ಅನುಮತಿ ಕೊಡುವುದು ಒಳ್ಳೆಯ ಸಂಗತಿ. ರಾತ್ರಿ ವೇಳೆ ಪ್ರಯಾಣ ಮಾಡುವಾಗ ತುಂಬ ಕಷ್ಟವಾಗುತ್ತದೆ. ಸರ್ಕಾರ ಒಪ್ಪಿಗೆ ಕೊಟ್ಟಿದ್ದೆ ಆದಲ್ಲಿ ತುಂಬ ಉಪಯೋಗವಾಗಲಿದೆ ಎಂದು ಗ್ರಾಹಕರೊಬ್ಬರು ಸಂತಸ ಹಂಚಿಕೊಂಡಿದ್ದಾರೆ. ಒಟ್ನಲ್ಲಿ, ಹೋಟೆಲ್ಗಳನ್ನ 24 ಗಂಟೆಗಳ ಕಾಲ ಓಪನ್ ಮಾಡುವುದಕ್ಕೆ ಅನುಮತಿಯನ್ನ ನೀಡಿದ್ರು ಕೂಡ ಟಫ್ ರೂಲ್ಸ್ ಗಳನ್ನ ಜಾರಿ ಮಾಡುವ ಸಾಧ್ಯತೆ ಇದೆ. ಅದ್ರಲ್ಲಿ, 10 ಕ್ಕಿಂತ ಹೆಚ್ಚು ನೌಕರರು ಇರಬೇಕು. ವಾಚ್ ಮ್ಯಾನ್ ಇರಬೇಕು, ಸಿಸಿ ಟಿವಿ ಕ್ಯಾಮರಾಗಳು ಇರಬೇಕು, ಸುರಕ್ಷ ವ್ಯವಸ್ಥೆ ಇರಬೇಕು ಎನ್ನುವ ರೂಲ್ಸ್ ಗಳು ಜಾರಿಯಾಗುವ ಸಾಧ್ಯತೆ ಇದ್ದು, ಹೋಟೆಲ್ ಗಳಿಗೆ 10 ರಿಂದ 20 % ಲಾಭದ ಜೊತೆಗೆ 10 ರಿಂದ 20 ಸಾವಿರ ಉದ್ಯೋಗವು ಸೃಷ್ಟಿಯಾಗಲಿದೆ.