“ನನ್ನನ್ನು ಕ್ಷಮಿಸಿ”: ಯುಕೆ ಪಿಎಂ ರಿಷಿ ಸುನಕ್’ಗೆ ಯುಕೆ ಚುನಾವಣೆಯಲ್ಲಿ ಸೋಲು

ಲಂಡನ್: ಯುಕೆ ಪ್ರಧಾನಿ ರಿಷಿ ಸುನಕ್ ಅವರು ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಂಡಿದ್ದಾರೆ.  ಲೇಬರ್ ಪಕ್ಷವು 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಆದರೆ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ 61 ರಲ್ಲಿ ಮುಂದಿದೆ.

“ಈ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಾರ್ಟಿ ಗೆದ್ದಿದೆ. ಅವರ ಗೆಲುವಿಗೆ ಅಭಿನಂದಿಸಲು ನಾನು ಸರ್ ಕೀರ್ ಸ್ಟಾರ್ಮರ್‌ಗೆ ಕರೆ ಮಾಡಿದ್ದೇನೆ. ಇಂದು ಅಧಿಕಾರವು ಶಾಂತಿಯುತವಾಗಿ ಮತ್ತು ಕ್ರಮಬದ್ಧವಾಗಿ, ಎಲ್ಲಾ ಕಡೆಯಿಂದಲೂ ಸದ್ಭಾವನೆಯೊಂದಿಗೆ ವರ್ಗಾವಣೆಗೊಳ್ಳಲಿದೆ. ನಮ್ಮ ದೇಶದ ಸ್ಥಿರತೆ ಕಾಪಾಡುವ ವಿಶ್ವಾಸ ಹೊಂದಿದ್ದೇವೆ” ಎಂದು ಎಂದು ರಿಚ್ಮಂಡ್ ಮತ್ತು ಉತ್ತರ ಅಲರ್ಟನ್‌ನಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ರಿಷಿ ಸುನಕ್ ಮಾತನಾಡಿದ್ದಾರೆ.

“ನನ್ನನ್ನು ಕ್ಷಮಿಸಿ, ಸೋಲಿನ ಹೊಣೆಯನ್ನು ನಾನು ತೆಗೆದುಕೊಳ್ಳುತ್ತೇನೆ” ಎಂದು ಅವರು ಹೇಳಿದರು.

Latest Indian news

Popular Stories