ನಾವು ನೂರು ರೂಪಾಯಿ ಟ್ಯಾಕ್ಸ್ ಕಟ್ಟಿದರೆ 13 ರೂಪಾಯಿ ಕೇಂದ್ರ ಸರ್ಕಾರ ವಾಪಸು ಬರುತ್ತೆ; ಆದರೆ ಉತ್ತರ ಭಾರತದವರು ನೂರು ರೂಪಾಯಿ ಕಟ್ಟಿದರೆ 200 ರೂಪಾಯಿ ವಾಪಸು ಕೊಡುತ್ತೆ ಎನ್ನುವ ವೀಡಿಯೋವೊಂದು ವೈರಲಾಗಿದೆ. ಇತ್ತೀಚೆಗೆ ಉತ್ತರ ಭಾರತದ ಯುವತಿಯೊಬ್ಬಳು ಉತ್ತರ ಭಾರತದವರು ಬೆಂಗಳೂರು ತೊರೆದರೆ ಬೆಂಗಳೂರಿನಲ್ಲಿ ಏನು ಉಳಿಯುತ್ತೆ ಎಂದು ಹಂಗಿಸಿದ್ದಳು. ಅದನ್ನು ಪ್ರಶ್ನಿಸುವ ಸಂದರ್ಭದಲ್ಲಿ ಈ ಮಾತನ್ನು ಸಂಘಪರಿವಾರದ ನಾಯಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಖಾಸಗಿ ವಾಹಿನಿಯ ರಾಷ್ಟ್ರಧರ್ಮ ಎಂಬ ವಿಚಾರಗೋಷ್ಠಿಯಲ್ಲಿ ಅವರು ವಿಚಾರ ಮಂಡಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ.
ವೀಡಿಯೋ ನೋಡಿ:
ವೀಡಿಯೋ ಕೃಪೆ: ರಿಪಬ್ಲಿಕ್ ಟಿವಿ