ನವ ದೆಹಲಿ:
ವೈರಲ್ ವಿಡಿಯೋದಲ್ಲಿ ಮುಸ್ಲಿಂ ಸಹಪಾಠಿಗೆ ಕಪಾಳಮೋಕ್ಷ ಮಾಡಲು ವಿದ್ಯಾರ್ಥಿಗಳಿಗೆ ಸೂಚಿಸಿದ ಉತ್ತರ ಪ್ರದೇಶದ ಶಾಲಾ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಮುಜಾಫರ್‌ನಗರದ ನೇಹಾ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರೂ ಆಗಿರುವ ತ್ರಿಪ್ತಾ ತ್ಯಾಗಿ ಅವರು 7 ವರ್ಷದ ಬಾಲಕನಿಗೆ ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳನ್ನು ಕೇಳುವಾಗ ಕೋಮುವಾದಿ ಧೋರಣೆ ತಾಳೆದಿದ್ದು, ಪುಟ್ಟ ಮುಸ್ಲಿಂ ವಿದ್ಯಾರ್ಥಿ ಕಣ್ಣೀರು ಸುರಿಸುತ್ತಾ ಅಸಹಾಯಕನಾಗಿ ನಿಂತಿದ್ದ.
ಆದಾಗ್ಯೂ, ತ್ರಿಪ್ತ ತ್ಯಾಗಿ, ತನ್ನ ಅತಿರೇಕದ ಕೃತ್ಯಕ್ಕೆ “ನಾಚಿಕೆಪಡುವುದಿಲ್ಲ” ಎಂದು ಹೇಳುತ್ತಾರೆ. “ನನಗೆ ನಾಚಿಕೆಯಾಗುವುದಿಲ್ಲ. ನಾನು ಶಿಕ್ಷಕಿಯಾಗಿ ಈ ಗ್ರಾಮದ ಜನರಿಗೆ ಸೇವೆ ಸಲ್ಲಿಸಿದ್ದೇನೆ. ಅವರೆಲ್ಲರೂ ನನ್ನೊಂದಿಗೆ ಇದ್ದಾರೆ” ಎಂದು ತ್ಯಾಗಿ ಎನ್‌ಡಿಟಿವಿಗೆ ತಿಳಿಸಿದರು.
ಶಾಲೆಯಲ್ಲಿ ಮಕ್ಕಳನ್ನು “ನಿಯಂತ್ರಿಸುವುದು” ಮುಖ್ಯ ಎಂದು ಹೇಳುವ ಮೂಲಕ ಅವರು ತಮ್ಮ ಕ್ರಿಯೆಯನ್ನು ಸಮರ್ಥಿಸಲು ಪ್ರಯತ್ನಿಸಿದರು.
“ಅವರು ಕಾನೂನುಗಳನ್ನು ಮಾಡಿದ್ದಾರೆ, ಆದರೆ ನಾವು ಶಾಲೆಗಳಲ್ಲಿ ಮಕ್ಕಳನ್ನು ನಿಯಂತ್ರಿಸಬೇಕಾಗಿದೆ. ನಾವು ಅವರನ್ನು ಹೀಗೆ ನಿಭಾಯಿಸುತ್ತೇವೆ” ಎಂದು ಅತ್ಯಂತ ಬೇಜಾಬ್ದಾರಿಯುತವಾಗಿ ತ್ಯಾಗಿ ಪ್ರತಿಕ್ರಿಯಿಸಿದ್ದಾರೆ.