ಕರ್ನಾಟಕದಲ್ಲಿ ಮುತ್ತಯ್ಯ ಮುರಳೀಧರನ್ ರಿಂದ ರೂ. 1,400 ಕೋಟಿ ಹೂಡಿಕೆ!

ಬೆಂಗಳೂರು: ಶ್ರೀಲಂಕಾದ ಮಾಜಿ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಅವರು ಚಾಮರಾಜನಗರ ಜಿಲ್ಲೆಯ ಬದನಕುಪ್ಪೆಯಲ್ಲಿ ತಂಪು ಪಾನೀಯ ಮತ್ತು ಸಿಹಿ ತಿಂಡಿಗಳ ಉದ್ಯಮ ಆರಂಭಿಸುತ್ತಿದ್ದು, ಹಂತ ಹಂತವಾಗಿ ಒಟ್ಟು ರೂ. 1,400 ಕೋಟಿ ಹೂಡಿಕೆ ಮಾಡಲಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಮಂಗಳವಾರ ತಿಳಿಸಿದರು.

ಮುತ್ತಯ್ಯ ಮುರಳೀಧರನ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಮುರಳೀಧರನ್ ಅವರು, ಮುತ್ತಯ್ಯ ‘ಬ್ರಿವರೇಜಸ್ ಮತ್ತು ಕನ್ಫಕ್ಷನರೀಸ್’ ಎನ್ನುವ ಬ್ರ್ಯಾಂಡ್ ನಲ್ಲಿ ತಮ್ಮ ಉದ್ಯಮ ಆರಂಭಿಸಿದ್ದು, ಆರಂಭದಲ್ಲಿ 230 ಕೋಟಿ ರೂ. ಹೂಡಿಕೆಗೆ ಯೋಜನೆ ರೂಪಿಸಲಾಗಿತ್ತು. ನಂತರ ಇದೀಗ ಅದು ಸಾವಿರ ಕೋಟಿ ಮುಟ್ಟುತ್ತಿದೆ. ಮುಂದಿನ ದಿನಗಳಲ್ಲಿ 1,400 ಕೋಟಿ ರೂ. ಆಗಲಿದೆ ಎಂದು ಅವರು ವಿವರಿಸಿದರು.

ಯೋಜನೆಗಾಗಿ ಈಗಾಗಲೇ 46 ಎಕರೆ ಭೂಮಿ ನೀಡಲಾಗಿದ್ದು, ಮುಂದಿನ ವರ್ಷದ ಜನವರಿಯಲ್ಲಿ ಉತ್ಪಾದನಾ ಚಟುವಟಿಕೆ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.

Latest Indian news

Popular Stories