ಅಲಿಯಾಬಾದ್ನಲ್ಲಿ ನಿರ್ಮಿಸಲಾದ ಸುಸಜ್ಜಿತ ಗೂಡ್ಸ್ಶೆಡ್ ಉದ್ಘಾಟನೆ

A 1 3 Featured Story, State News, Vijayapura
ವಿಜಯಪುರ: ವಿಜಯಪುರ ರೈಲ್ವೆ ನಿಲ್ದಾಣದಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ನಿಲ್ದಾಣದಲ್ಲಿ ಪ್ಯಾಸೆಂಜರ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಪ್ರತ್ಯೇಕವಾದ ಗೂಡ್ಸ್ ಸೌಲಭ್ಯವನ್ನು ಕಲ್ಪಿಸಲು ಅಲಿಯಾಬಾದ್ನಲ್ಲಿ ಗೂಡ್ಸ್ ಟರ್ಮಿನಲ್ನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಎಂದು ಸಂಸದ ರಮೇಶ ಜಿಗಜಿಣಗಿ ಅವರು ಹೇಳಿದರು.
ವಿಜಯಪುರ ಹೊರವಲಯದ ಅಲಿಯಾಬಾದ್ನಲ್ಲಿ ನೂತನವಾಗಿ ನಿರ್ಮಿಸಲಾದ ಗೂಡ್ಸ್ಶೆಡ್ನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು, ವಿಜಯಪುರ ಮಧ್ಯಭಾಗದಲ್ಲಿ ಗೂಡ್ಸಶೆಡ್ವಿರುವುದರಿಂದ ಸರಕು ಸಾಗಾಣಿಕೆ, ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಗಮನಿಸಿ, ಹೊರವಲಯದ ಅಲಿಯಾಬಾದ್ಗೆ ಸ್ಥಳಾಂತರಗೊಳಿಸಲು ಕೇಂದ್ರ ರೈಲ್ವೆ ಖಾತೆ ಸಚಿವರು ಹಾಗೂ ರೇಲ್ವೆ ಪ್ರಧಾನ ವ್ಯವಸ್ಥಾಪಕರನ್ನು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಇಂದು ಅಲಿಯಾಬ್ದಲ್ಲಿ ಸುಸಜ್ಜಿತ ಗೂಡ್ಸ್ಶೆಡ್ ನಿರ್ಮಾಣಗೊಂಡಿದೆ ಎಂದು ಹೇಳಿದರು.
ಎರಡು ಅಂತಸ್ತಿನ ಗೂಡ್ಸ್ಶೆಡ್ ಕಟ್ಟಡವನ್ನು ನಿರ್ಮಿಸಲಾಗಿದೆ. ಗೂಡ್ಸ್ಶೆಡ್ ಕಾರ್ಯಾಲಯ, ಎಫ್ಓಐಎಸ್ ಕೊಠಡಿ, ಆರ್ಪಿಎಫ್ ಕೊಠಡಿ, ವಿಶ್ರಾಂತಿ ಕೊಠಡಿ, ಟಿಎಕ್ಸ್ಆರ್ ಕೊಠಡಿ, ವರ್ತಕರ ಕೊಠಡಿ, ಕಾರ್ಮಿಕರ ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ವಿಜಯಪುರದಿಂದ ಅಲಿಯಾಬಾದ್ಗೆ ಗೂಡ್ಸ್ ಶೆಡ್ ಸ್ಥಳಾಂತರಿಸುವುದರಿAದ ವಿಜಯಪುರ ನಿಲ್ದಾಣದಲ್ಲಿ ಜನದಟ್ಟಣೆ ಕಡಿಮೆಯಾಗುವುದಲ್ಲದೇ, ಹೆಚ್ಚುವರಿ ಲೂಪ್ ಲೈನ್ಗಳು, ಪಿಟ್ಲೈನ್, ಸ್ಟೇಬಲಿಂಗ್ ಸೇರಿದಂತೆ ವಿವಿಧ ಕೋಚಿಂಗ್ ಸೌಲಭ್ಯವನ್ನು ಒದಗಿಸಲು ಅನುಕೂಲವಾಗಲಿದೆ. ಅಲಿಯಾಬಾದ್ ಗೂಡ್ಸಶೆಡ್ನಲ್ಲಿ ದಿನಕ್ಕೆ 20-30 ರ್ಯಕ್ ಗಳನ್ನು ಲೋಡಿಂಗ್ ಮತ್ತು ಅನ್ಲೋಡಿಂಗ್ ಮಾಡಲು ಅವಕಾಶ ಕಲ್ಪಿಸಿದೆ. ಇದರಿಂದ ಜಿಲ್ಲೆಯ ವ್ಯಾಪಾರ ವಹಿವಾಟಕ್ಕೂ ಸುಗಮವಾಗಲಿದೆ. ಪಡ್ನೂರ ಗ್ರಾಮದ ಹತ್ತಿರ ನದಿಗೆ ರೈಲ್ವೆ ಕೆಳಸೇತುವೆ ನಿರ್ಮಾಣ ಮಾಡಿದೆ. ಜಿಲ್ಲೆಯಲ್ಲಿ 16 ಅಂಡರ್ಪಾಸ್ಗಳಿಗೆ ಮಂಜೂರಾತಿ ನೀಡಲಾಗಿದೆ. ರೈಲ್ವೆ ಇಲಾಖೆಯಿಂದ ಜಿಲ್ಲೆಯಲ್ಲಿ 6 ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.ಹೊಸ ಹೊಸ ರೈಲುಗಳು ವಿಜಯಪುರ ಮಾರ್ಗವಾಗಿ ಸಂಚರಿಸುತ್ತಿವೆ. ವಂದೇ ಭಾರತ ರೈಲನ್ನು ಸಹ ಸೋಲಾಪುರದಿಂದ ವಿಜಯಪುರದವರೆಗೆ ವಿಸ್ತರಿಸಲು ಪ್ರಯತ್ನಿಸಲಾಗುವುದು. ಜಿಲ್ಲೆಯಲ್ಲಿ ದಿನಕ್ಕೆ 22 ರಿಂದ 23 ರೈಲುಗಳ ಓಡಾಟವಾಗುತ್ತಿರುವುದರಿಂದ ಜಿಲ್ಲೆಯ ಅಭಿವೃದ್ದಿಗೆ ಅನೂಕೂಲಕರವಾಗಿದೆ ಎಂದು ಹೇಳಿದರು.
ಮೈಸೂರು-ಫಂಡರ್ಪುರ ರೈಲು ವಿಜಯಪುರ ಮಾರ್ಗವಾಗಿ ಸಂಚಾರ ಆರಂಭಿಸಲಾಗಿದೆ. ಹುಬ್ಬಳ್ಳಿಯಿಂದ ನಿಜಾಮುದ್ದೀನ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ವಾರದಲ್ಲಿ ಒಂದು ದಿನ ವಿಜಯಪುರ ಮಾರ್ಗದಿಂದ ಸಂಚರಿಸುತ್ತಿದೆ. ಈ ರೈಲನ್ನು ವಾರದಲ್ಲಿ ಮೂರು ದಿನ ಸಂಚರಿಸಲು ಪ್ರಸ್ತಾವನೆ ಸಲ್ಲಿಲಾಗುವುದು ಎಂದು ಹೇಳಿದರು.
ರೈಲ್ವೆ ಇಲಾಖೆಯ ವಿಭಾಗೀಯ ಹಿರಿಯ ವಾಣಿಜ್ಯ ವಿಭಾಗದ ವ್ಯವಸ್ಥಾಪಕರಾದ ಸಂತೋಷ ಹೆಗಡೆ ಅವರು ಮಾತನಾಡಿ, ಅಂದಾಜು 23.02 ಕೋಟಿ ರೂ. ವೆಚ್ಚದಲ್ಲಿ ಅಲಿಯಾಬಾದ್ನಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಗೂಡ್ಸ್ಶೆಡ್ನಲ್ಲಿ ಅಹಾರ ಪದಾರ್ಥಗಳು, ರಸಗೊಬ್ಬರ, ಪೂರೈಕೆಗೆ ಅನುಕೂಲ ಕಲ್ಪಿಸಿದೆ. ಈ ಭಾಗದ ಜನರ ಅಪೇಕ್ಷೆ ಮೇರೆಗೆ ಅಲಿಯಾಬಾದ್ನಲ್ಲಿ ನಿರ್ಮಿಸಲಾದ ಗೂಡ್ಸ್ಶೆಡ್ನಲ್ಲಿ ಏಕಕಾಲದಲ್ಲಿ ಎರಡು ಟ್ರೇನ್ಗಳಿಂದ ಲೋಡಿಂಗ್ ಹಾಗೂ ಅನ್ಲೋಡಿಂಗ್ ಮಾಡಬಹುದುದಾಗಿದ್ದು, ಇದರಿಂದ ಸಮಯವೂ ಉಳಿತಾಯವಾಗಿ, ಸರಕು ಸಾಗಾಣಿಕೆಗೆ ಅನುಕೂಲ ಕಲ್ಪಿಸುವುದರೊಂದಿಗೆ ಆರ್ಥಿಕತೆಗೆ ಇಂಬು ಒದಗಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮುಖ್ಯ ಅಭಿಯಂತರ ಸಧರ್ಮ ದೇವರಾಯಲ್, ಎಡಿಆರ್ಎಂ ಸಂಜಯ, ರೈಲ್ವೆ ಇಲಾಖೆಯ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.

Latest Indian news

Popular Stories