ನವದೆಹಲಿ: ಅಪರಾಧ ತಡೆಯುವ ಬದಲು ನಾಟಕ ಮಾಡುತ್ತಿದ್ದಾರೆಂದು ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಕಿಡಿಕಾರಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರನ್ನು ಖರೀದಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಯತ್ನಿಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲು ಕಳೆದ ಎರಡು ದಿನಗಳಿಂದ ದೆಹಲಿ ಪೊಲೀಸ್ ಅಪರಾಧ ದಳದ ಅಧಿಕಾರಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ,
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್ ಅವರು, ರಾಷ್ಟ್ರ ರಾಜಧಾನಿಯಲ್ಲಿ ಅಪರಾಧಗಳನ್ನು ನಿಲ್ಲಿಸುವ ಬದಲು ದೆಹಲಿಯಲ್ಲಿ ಅಪರಾಧ ಹೆಚ್ಚಾಗಲು ಕಾರಣಕರ್ತರಾಗಿರುವ ರಾಜಕೀಯ ಮಾಸ್ಟರ್ ಗಳ ಸೂಚನೆ ಮೇರೆಗೆ ನಾಟಕ ಮಾಡುತ್ತಿದ್ದಾರೆಂದು ಹೇಳಿದ್ದಾರೆ.