ಇರಾನ್ 24 ಗಂಟೆಗಳಲ್ಲಿ ಇಸ್ರೇಲ್ ಮೇಲೆ ದಾಳಿ ಮಾಡುವ ಸಾಧ್ಯತೆ | ಸಹಾಯಕ್ಕಾಗಿ ಯುಎಸ್ ಅಂಗಲಾಚುತ್ತಿದೆ ಇಸ್ರೇಲ್!

ನವ ದೆಹಲಿ: ಡಮಾಸ್ಕಸ್‌ನಲ್ಲಿರುವ ಇರಾನ್‌ನ ರಾಯಭಾರ ಕಚೇರಿಯ ಮೇಲೆ ಕಳೆದ ವಾರ ನಡೆದ ಹಿರಿಯ ಅಧಿಕಾರಿಯ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಲು ಮುಂದಾಗಿದೆ. 24 ಗಂಟೆಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ.

ಇರಾನ್‌ ಶೀಘ್ರ ದಾಳಿ ನಡೆಸುವ ಸಾಧ್ಯತೆ ಇರುವ ಕುರಿತು ಯುಎಸ್ ಅಧ್ಯಕ್ಷ ಜೋ ಬಿಡೆನ್ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್ ಇರಾನ್ ಅಧಿಕಾರಿಗಳ ಮೇಲೆ ನಡೆಸಿದ ದಾಳಿ ದುಬಾರಿಯಾಗಿ ಪರಿಣಮಿಸಿದ್ದು ಇದೀಗ ಈ ಘರ್ಷಣೆಯಲ್ಲಿ ಅಮೇರಿಕಾ ತಟಸ್ಥವಾದರೆ ಇಸ್ರೇಲ್ ಸಂಕಷ್ಟ ಎದುರುಸಲಿದೆ.

ಈಗಾಗಲೇ ಭಾರತವು ಇರಾನ್ ಮತ್ತು ಇಸ್ರೇಲ್ ಗೆ ಪ್ರಯಾಣಿಸದಂತೆ ಭಾರತೀಯರಿಗೆ ಸೂಚನೆ ಹೊರಡಿಸಿದೆ.

ಡಮಾಸ್ಕಸ್‌ನಲ್ಲಿರುವ ಇರಾನ್ ಕಾನ್ಸುಲೇಟ್ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ಜನರಲ್‌ಗಳು ಸೇರಿದಂತೆ ಏಳು ಜನರ ಹತ್ಯೆಯಾಗಿತ್ತು.

Latest Indian news

Popular Stories