ಐಆರ್ ಬಿ ಕಂಪನಿ ಕೇಂದ್ರ ಸರ್ಕಾರವನ್ನೇ ಖರೀದಿಸಿದೆ : ಸಚಿವ ಮಾಂಕಾಳು ವೈದ್ಯ ಆರೋಪ

ಕಾರವಾರ : ರಾಷ್ಟ್ರೀಯ ಹೆದ್ದಾರಿ 66 ರ ಅಧ್ವಾನಗಳನ್ನು ಹತ್ತು ವರ್ಷಗಳಾದರೂ ಸರಿಪಡಿಸದಿರುವುದನ್ನು ಗಮನಿಸಿದರೆ, ಐಆರ್ ಬಿ ಕಂಪನಿ ಕೇಂದ್ರ ಸರ್ಕಾರವನ್ನೇ ಖರೀದಿಸಿದೆ ಅಥವಾ ಐಆರ್ ಬಿ ಕಂಪನಿಗೆ ಕೇಂದ್ರ ಸರ್ಕಾರ ಮಾರಿಕೊಂಡಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ ಆರೋಪಿಸಿದರು‌ .


ಕಾರವಾರದಲ್ಲಿ ‌ ಮಂಗಳವಾರ ನಡೆದ ಕೆಡಿಪಿ ಸಭೆಯ ಮಧ್ಯಾಹ್ನದ ಬಿಡುವಿನ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಎರಡು ತಿಂಗಳಲ್ಲಿ ಸರಾಸರಿ ನೂರು ಅಪಘಾತ ಎನ್ ಎಚ್ 66 ರಲ್ಲಿ ನಡೆಯುತ್ತಿವೆ. ಜನರ ಜೀವ ಹೋದರು ಬೈಪಾಸ್ ರಸ್ತೆಗಳು, ಅಂಡರ್ ಪಾಸ್ ಕೆಲಸಗಳನ್ನು, ಹೈವೆಯಲ್ಲಿ ಬೇಕಾದ ಸೌಲಭ್ಯ ನೀಡುತ್ತಿಲ್ಲ. ಹದಿನಾರು ತಿಂಗಳಿಂದ ಹೆದ್ದಾರಿ ಕಾಮಗಾರಿಯ ಅವೈಜ್ಞಾನಿಕ ಕೆಲಸ ಸರಿಪಡಿಸಲು ಕೂಗುತ್ತಿದ್ದೇನೆ.‌ ಒಂದು ಅವರು ಕೆಲಸ ಮಾಡಬೇಕು ಇಲ್ಲ , ಯೋಜನೆ ಬಿಟ್ಟ ಹೊರನಡೆಯಬೇಕು ಎಂದು ಎಚ್ಚರಿಸಿದರು.‌


ಐಆರ್ ಬಿ ಕಂಪನಿಗೆ ಕೇಂದ್ರದ ಮಂತ್ರಿಯದು ಎಂದು ದೃಶ್ಯಮಾಧ್ಯಮಗಳಲ್ಲಿ ಕೇಳಿದ್ದೇನೆ. ಜಿಲ್ಲೆಯ ಒಂದು ಪಕ್ಷದ ಪ್ರತಿನಿಧಿಗಳು ಅವರ ಜೊತೆ ಇರುವುದು ಸಹ ಗೊತ್ತು. ಹಾಗಾಗಿ ಅವರು ಜನರಿಗೆ ಸ್ಪಂದಿಸುತ್ತಿಲ್ಲ‌ .5 .98 ಕಿಮಿ ಕೆಲಸ ಬಾಕಿ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೇಳುತ್ತಿದೆ. ಹಾಗಾದರೆ ಹೊನ್ನಾವರ ಹಳೆಯ ಸೇತುವೆ ಪುನರ್ನಿರ್ಮಾಣ ಇವರ ಕೆಲಸ ಅಲ್ಲವೇ? ಹೊನ್ಮಾವು, ಭಟ್ಕಳದ ಹೆದ್ದಾರಿ ಸೇತುವೆ ಮಾಡುವುದು ಯಾವಾಗ ಎಂದು ಪ್ರಶ್ನಿಸಿದ ಸಚಿವರು, ಇವರಿಗೆ 1.95 ಕಿಮೀ.‌ ಕಡೆ ಭೂಸ್ವಾಧೀನ ಕೆಲಸ ನಾವು ಮಾಡಿಕೊಡಬೇಕು ನಿಜ. ಕುಮಟಾ ತಾಲ್ಲೂಕಿನಲ್ಲಿ ಆ ಕೆಲಸ ಇದೆ.‌ಸ್ವಲ್ಪ ಶಿರೂರು ಭಾಗದಲ್ಲಿದೆ. ಆದರೆ 187 ಕಿಮೀ.‌ಯಲ್ಲಿ ಇವರು 179 ಕಿಮೀ ರಸ್ತೆ ಮಾಡಿದ್ದೇವೆ ಎಂಬುದರಲ್ಲಿ ಶೇ. 100 ರಷ್ಟು ಕೆಲಸ ಪೂರ್ಣವಾಗಿದೆಯೇ ? 179 ಕಿಮೀ ಬೈಪಾಸ್ ಮಾಡಿದ್ದಾರೆಯೇ ಎಂದು ಸಚಿವ ವೈದ್ಯ ಪ್ರಶ್ನಿಸಿದರು.

Latest Indian news

Popular Stories