ಮನೆಯಲ್ಲೇ ಮಗುವನ್ನು ಹೆತ್ತ ಮಹಿಳೆ | ತುರ್ತು ಪರಿಸ್ಥಿತಿಯಲ್ಲಿ ತಾಯಿ ಮಗುವನ್ನು ಆಸ್ಪತ್ರೆಗೆ ತಲುಪಿಸಿ ಪ್ರಾಣ ಉಳಿಸಿದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ

ಸ್ಥಳಕ್ಕೆ ಬಾರದ 108 ಆಂಬುಲೆನ್ಸ್

ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ತೊಟ್ಟಂ ನಲ್ಲಿ ವಾಸವಾಗಿರುವ ಗದಗ ಮೂಲದ ತುಂಬು ಗರ್ಭಿಣಿ ಪವಿತ್ರ ಎಂಬವರಿಗೆ ಬೆಳಿಗ್ಗೆ 11:30 ಗಂಟೆಗೆ ಪ್ರಸವಬೇನೆ ಶುರುವಾಗಿದೆ.

ಆಶಾ ಕಾರ್ಯಕರ್ತೆ 108 ಆಂಬುಲೆನ್ಸ್ ಗೆ ಕರೆ ಮಾಡಿದರೂ ಕೂಡ 108 ಆಂಬುಲೆನ್ಸ್ ಸ್ಥಳಕ್ಕೆ ಧಾವಿಸದೆ ಮನೆಯಲ್ಲೇ ಮಗುವಿನ ಜನನವಾಗಿದೆ.

ನಂತರ ಈಶ್ವರ್ ಮಲ್ಪೆಯವರಿಗೆ ಆಶಾ ಕಾರ್ಯಕರ್ತೆ ಕರೆ ಮಾಡಿ ವಿಚಾರ ತಿಳಿಸಿದರು. ಕರೆಗೆ ಸ್ಪಂದಿಸಿದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ತಕ್ಷಣ ತೊಟ್ಟಂ ಕರಾವಳಿ ಯುವಕ ಮಂಡಲದ ಬಳಿಯಿರುವ ಮನೆಗೆ ತಲುಪಿ ತಾಯಿ ಮತ್ತು ನವಜಾತ ಶಿಶುವನ್ನು ರಕ್ತಸ್ರಾವವಾಗದ ರೀತಿಯಲ್ಲಿ ಆಂಬುಲೆನ್ಸ್ ಮುಖಾಂತರ ಉಡುಪಿಯ ಹಾಜಿ ಅಬ್ದುಲ್ಲಾ ಆಸ್ಪತ್ರೆಗೆ ತಲುಪಿಸಿ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.

ಹಾಜಿ ಅಬ್ದುಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ತಾಯಿ ಮಗುವಿಗೆ ಬೇಕಾದ ಚಿಕಿತ್ಸೆಯನ್ನು ನೀಡಿದರು. ತಾಯಿ ಮತ್ತು ಮಗು ಅಪಾಯದಿಂದ ಪಾರಾಗಿದ್ದಾರೆ.

Latest Indian news

Popular Stories