ಹಮಾಸ್‌ಗೆ ಇಸ್ರೇಲಿ ತಾಯಿಯ ಪತ್ರ: ‘ಅಸಾಧಾರಣ ಮಾನವೀಯತೆಗೆ ಧನ್ಯವಾದಗಳು’ | “ನೀವೆಲ್ಲರೂ ಆಕೆಯ ಸ್ನೇಹಿತರು, ಆಕೆಗೆ ರಾಣಿಯಂತೆ ಭಾಸವಾಗಿದೆ”

ಇಸ್ರೇಲ್ ಆಕ್ರಮಣ ನಡೆಸುತ್ತಿದ್ದರೂ ಗಾಜಾದಲ್ಲಿ 49 ದಿನಗಳ ಸೆರೆಯಲ್ಲಿದ್ದಾಗ ತನ್ನ ಮಗಳು ಎಮಿಲಿಯಾಗೆ ನೀಡಿದ ಕಾಳಜಿಗಾಗಿ ಹಮಾಸ್ ಹೋರಾಟಗಾರರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಭಾವನಾತ್ಮಕ ಪತ್ರವನ್ನು ಡೇನಿಯಲ್ ಅಲೋನಿ ಬರೆದಿದ್ದಾರೆ.

17606141 0 99 1023 576 Featured Story, INTERNATIONAL

ಡೇನಿಯಲ್ ಅಲೋನಿ ಮತ್ತು ಆಕೆಯ ಮಗಳು ಎಮಿಲಿಯಾ (5) ಅವರನ್ನು ಗಾಜಾದಲ್ಲಿ ಹಮಾಸ್ 49 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿತ್ತು.

ನವೆಂಬರ್ 24 ರಂದು ಹಮಾಸ್ ಮತ್ತು ಇಸ್ರೇಲ್ ನಡುವಿನ ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಭಾಗವಾಗಿ ಇಸ್ರೇಲಿ ತಾಯಿ ಮತ್ತು ಮಗಳನ್ನು ಬಿಡುಗಡೆ ಮಾಡಲಾಯಿತು. ಅವರು ತಮ್ಮ ಸಂಬಂಧಿಕರೊಂದಿಗೆ ಮತ್ತೆ ಸೇರಿಕೊಂಡರು.

ಅವರು ಗಾಜಾವನ್ನು ತೊರೆಯುವ ಮೊದಲು, ಡೇನಿಯಲ್ ಅಲೋನಿ ಅವರು ಹಮಾಸ್‌ಗೆ “ಧನ್ಯವಾದ” ಪತ್ರವನ್ನು ಬರೆದಿದ್ದಾರೆ. “ನನ್ನ ಮಗಳು ಎಮಿಲಿಯಾ ಕಡೆಗೆ ತೋರಿದ ನಿಮ್ಮ ಅಸಾಮಾನ್ಯ ಮಾನವೀಯತೆಗೆ ನನ್ನ ಹೃದಯಂತರಾಳದ ಧನ್ಯವಾದಗಳು” ಎಂದು ಹೇಳಿದ್ದಾರೆ.

ಪತ್ರವನ್ನು ಮೂಲತಃ ಹೀಬ್ರೂ ಭಾಷೆಯಲ್ಲಿ ಬರೆಯಲಾಗಿದೆ ಮತ್ತು ಅರೇಬಿಕ್ ಭಾಷಾಂತರದೊಂದಿಗೆ ಇಸ್ರೇಲಿ ತಾಯಿ ಮತ್ತು ಅವರ ಮಗಳ ಛಾಯಾಚಿತ್ರದೊಂದಿಗೆ ಹಮಾಸ್ ಹಂಚಿಕೊಂಡಿದೆ ಎಂದು ಟಿ.ಆರ್.ಟಿ ಮಾಧ್ಯಮ ವರದಿ ಮಾಡಿದೆ.

ತನ್ನ ಮಗಳೊಂದಿಗಿನ ಅತ್ಯುತ್ತಮ ವರ್ತನೆಗಾಗಿ ನೀವೆಲ್ಲರೂ ಆಕೆಯ ಸ್ನೇಹಿತರು. ಆಕೆಗೆ ರಾಣಿಯಂತೆ ಭಾಸವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Latest Indian news

Popular Stories