ಸಾರ್ವಜನಿಕರ ಎದುರೇ ಯುವತಿಯನ್ನು ಇರಿದು ಕೊಂದ ಪಾಗಲ್ ಪ್ರೇಮಿ!

ಬೆಂಗಳೂರು, ಮಾ.1 : ತನ್ನ ಕೆಲಸದ ಸ್ಥಳದಲ್ಲಿ ತನ್ನ ಪ್ರಿಯಕರನಿಂದ 16 ಬಾರಿ ಚೂರಿ ಇರಿತಕ್ಕೊಳಗಾಗಿ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಪೂರ್ವ ಬೆಂಗಳೂರಿನಲ್ಲಿ ನಡೆದಿದೆ.

ಮಹಿಳೆ ಮತ್ತು ಆಕೆಯ ಪ್ರೇಮಿ ಇಬ್ಬರೂ ವಿವಿಧ ಆರೋಗ್ಯ ಸೇವಾ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದು, ಆಂಧ್ರಪ್ರದೇಶದಿಂದ ಬಂದವರು.

ಮಂಗಳವಾರ ಸಂಜೆ 7.30 ರ ಸುಮಾರಿಗೆ ಅಪರಾಧ ಸಂಭವಿಸಿದೆ ಎಂದು ದೃಢಪಡಿಸಿದ ಡಿಸಿಪಿ (ಪೂರ್ವ) ಭೀಮಾಶಂಕರ್ ಎಸ್. ಗುಳೇದ್, ಒಂದೇ ಕಂಪನಿಯಲ್ಲಿ ಕೆಲಸ ಮಾಡುವಾಗ ಭೇಟಿಯಾದ ನಂತರ ಇಬ್ಬರು ಐದು ವರ್ಷಗಳ ಕಾಲ ಸಂಬಂಧ ಹೊಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದರು.

ಇಬ್ಬರೂ ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದಿನಕರ್ ಮದುವೆಯಾಗಲು ಬಯಸಿದಾಗ ಸಂತ್ರಸ್ತೆ ತನ್ನ ಕುಟುಂಬದ ಆಕ್ಷೇಪಣೆಯನ್ನು ಉಲ್ಲೇಖಿಸಿ ನಿರಾಕರಿಸಿದ್ದಳು

“ತಮ್ಮ ಮನೆಯವರು ತಮ್ಮ ಮದುವೆಗೆ ಒಪ್ಪುವುದಿಲ್ಲ ಎಂದು ಅವಳು ಹೇಳಿದಾಗ ಅವನು ಕೋಪಗೊಂಡುಅವಳನ್ನು ಇರಿದು ಕೊಂದಿದ್ದಾನೆ” ಎನ್ನಲಾಗಿದೆ.

ಮಂಗಳವಾರ ಸಂಜೆ ದಿನಕರ್, ಸಂತ್ರಸ್ತೆಯು ತನ್ನ ಕಚೇರಿಯಿಂದ ಹೊರಬಂದಾಗ ಆಕೆಯನ್ನು ದೂಷಿಸಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದ ನಂತರ, ದಾರಿಹೋಕರು ಆಘಾತದಿಂದ ನೋಡುತ್ತಿದ್ದಂತೆ ದಿನಕರ್ ಚಾಕುವಿನಿಂದ ಆಕೆಗೆ ಪದೇ ಪದೇ ಇರಿದಿದ್ದಾನೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ದಿನಕರ್ ನನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಾಗಿದೆ.

Latest Indian news

Popular Stories