ಜ್ಞಾನವ್ಯಾಪಿ ಮಸೀದಿ ಪ್ರಕರಣ: ಹಿಂದೂಗಳ ಪೂಜೆಗೆ ತಡೆ ಕೋರಿ ಸುಪ್ರೀಂ ಮೆಟ್ಟಿಲೇರಿದ್ದ ಮಸೀದಿ ಸಮಿತಿಗೆ ಹಿನ್ನಡೆ

ಲಕ್ನೋ: ಜ್ಞಾನವಾಪಿ ಪ್ರಕರಣದಲ್ಲಿ ಮಸೀದಿ ಸಮಿತಿಗೆ ಸುಪ್ರೀಂ ಕೋರ್ಟ್‌ನಿಂದ ದೊಡ್ಡ ಹೊಡೆತ ಬಿದ್ದಿದೆ. ‘ಜ್ಞಾನವಾಪಿಯಲ್ಲಿ ಹಿಂದೂಗಳು ನಡೆಸುತ್ತಿರುವ ಪೂಜೆಗೆ ತಡೆ ಕೋರಿ ಮಸೀದಿ ಸಮಿತಿಯ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದೆ. ಅಲ್ಲದೆ ಅಲಹಾಬಾದ್ ಹೈಕೋರ್ಟ್ ನಲ್ಲೇ ಅರ್ಜಿ ಸಲ್ಲಿಸುವಂತೆ ಸೂಚನೆಯನ್ನು ನೀಡಿದೆ.

ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಹಿಂದೂ ಭಕ್ತರಿಗೆ ಪ್ರಾರ್ಥನೆಗೆ ಸಲ್ಲಿಸುವಂತೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಬುಧವಾರ ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಆದರೆ ಮಸೀದಿ ಸಮಿತಿ ಸಮಿತಿ ಪೂಜೆಗೆ ತಡೆ ಕೋರಿ ಸುಪ್ರೀಂ ಮೆಟ್ಟಿಲೇರಿತ್ತು ಆದರೆ ಅಲ್ಲೂ ಹಿನ್ನಡೆಯಾದ ಪರಿಣಾಮ ಈಗ ಮಸೀದಿ ಸಮಿತಿ ಮತ್ತೆ ಅಲಹಾಬಾದ್ ಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ.
ಬುಧವಾರ ಜ್ಞಾನವಾಪಿ ಪ್ರಕರಣದ ತೀರ್ಪು ನೀಡುವಾಗ, ನೆಲಮಾಳಿಗೆಯಲ್ಲಿ ಪೂಜೆ ಮಾಡುವ ಹಕ್ಕು ಹಿಂದೂಗಳಿಗೆ ಇದೆ ಎಂದು ನ್ಯಾಯಾಲಯ ಹೇಳಿತ್ತು. ವ್ಯಾಸಜಿಯ ನೆಲಮಾಳಿಗೆಯಲ್ಲಿ ಪೂಜೆಯನ್ನು ಮಾಡಬಹುದು ಎಂದು ಹೇಳಿತ್ತು. ಅಲ್ಲದೆ ವಾಡಿ ಹಾಗೂ ಕಾಶಿ ವಿಶ್ವನಾಥ ಟ್ರಸ್ಟ್ ನ ಅರ್ಚಕರು ಪೂಜೆಯನ್ನು ನೆರವೇರಿಸಬೇಕು. ನೆಲಮಾಳಿಗೆಯಲ್ಲಿರುವ ವಿಗ್ರಹಗಳಿಗೆ ಪೂಜೆ ಸಲ್ಲಿಸಬೇಕು, ನೈವೇದ್ಯ ಮಾಡಬೇಕು. ಆಡಳಿತವು 7 ದಿನಗಳಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕು. ಆದ್ದರಿಂದ, ವಾರಣಾಸಿ ಆಡಳಿತವು ನ್ಯಾಯಾಲಯದ ಆದೇಶವನ್ನು ತಡರಾತ್ರಿಯಲ್ಲಿ ಕಾರ್ಯಗತಗೊಳಿಸಿತು. ಇದರ ಪರಿಣಾಮ ಜ್ಞಾನವಾಪಿ ಸುತ್ತ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ನಡುವೆ ಬುಧವಾರ ತಡರಾತ್ರಿ ಜ್ಞಾನವಾಪಿ ನೆಲ ಮಾಳಿಗೆಯಲ್ಲಿ ಸರ್ವೆ ವೇಳೆ ದೊರೆತ ಮೂರ್ತಿಗಳನ್ನು ಇಟ್ಟು ಪ್ರಾರ್ಥನೆ ಸಲ್ಲಿಸಿ, ಬಳಿಕ ಅರ್ಚಕರಿಂದ ವಿಗ್ರಹಗಳಿಗೆ ಪೂಜೆ ನೆರವೇರಿತು.

Latest Indian news

Popular Stories