ಕಾರವಾರ : ವಿವಾದಾತ್ಮಕ ಮತ್ತು ಕೀಳು ಭಾಷೆಯ ಮೂಲಕವೇ ಉಸಿರಾಡುವ ಕೆನರಾ ಸಂಸದ ಅನಂತ ಕುಮಾರ್ ಹೆಗಡೆ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ನಿನ್ನೆ ತನ್ನ ಬೆಂಬಲಿಗರ ಬಳಿ ಬನವಾಸಿಯಲ್ಲಿ ಮಾತನಾಡಿವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಗನೇ ಅನ್ನದೇ, ಅಪ್ಪ,ಮಾವ ಎಂದು ಕರೆಯಲಾಗುವುದೇ ಎಂದು ಹೇಳಿದ್ದಾರೆ. ಇದು ಯುದ್ಧ ಕಾಲ. ಯುದ್ಧ ಕಾಲದಲ್ಲಿ ಹಾಗೆ ಮಾತಾಡುವುದು ನಾನು. ಈ ಸಮಯದಲ್ಲಿ ಶಾಸ್ತ್ರೀಯ ಸಂಗೀತ, ಭರತ ನಾಟ್ಯ ಮಾಡಲಾಗುವುದಿಲ್ಲ ಎಂದಿದ್ದಾನೆ.
ಇಸ್ಲಾಂ ಧರ್ಮದ ಬಗ್ಗೆ ಸಹ ಅವಹೇಳನಕಾರಿ ಮಾತನಾಡಿದ್ದು,ಜಗತ್ತಿನಲ್ಲಿ ಇಸ್ಲಾಂ ಇರುವ ತನಕ ಶಾಂತಿ ನೆಲೆಸುವುದಿಲ್ಲ ಎಂದು ಹೇಳಿದ್ದಾನೆ. ಇದು ಅವರ ಹಳೆಯ ಹೇಳಿಕೆಯಾಗಿದ್ದು ಕೆಲ ವರ್ಷಗಳ ಹಿಂದೆ ಕನ್ನಡ ದೃಶ್ಯ ಮಾಧ್ಯಮಕ್ಕೆ ಈ ಹೇಳಿಕೆ ನೀಡಿದ್ದರು.
ಹಿಂದುತ್ವ ಮತ್ತು ಆರ್ ಎಸ್ ಎಸ್ ಇದ್ದರೆ ಮಾತ್ರ ಭಾರತ ಎಂದಿರುವ ಸಂಸದ , ನನ್ನ ಮೇಲೆ ಈಚೆಗೆ ಯಾವುದೇ ಕೇಸ್ ಇರಲಿಲ್ಲ. ಈಚೆಗೆ ಮಸೀದಿ ಕೆಡುವವ ಹೇಳಿಕೆ ನೀಡಿದ್ದೆ, ಈ ಕುರಿತು ಕೇಸ್ ದಾಖಲಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಆರ್ ಎಸ್ ಎಸ್ ಉಳಿಯಬೇಕು ಎಂದು ಅನಂತ ಕುಮಾರ್ ಪುನರುಚ್ಚರಿಸಿದ್ದಾರೆ.
……