ಬೆಂಗಳೂರು: ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-2025ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ.
ವಲಯವಾರು ವಿಂಗಡಣೆ ಮಾಡಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಿದ್ದು, ಯಾವ ವಲಯಕ್ಕೆ ಎಷ್ಟು ಅನುದಾನ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ…
ಶಿಕ್ಷಣ – 44,422 ಕೋಟಿ
ಮಹಿಳಾ ಮತ್ತು ಮಕ್ಕಳ ಇಲಾಖೆ – 34,406 ಕೋಟಿ
ಇಂಧನ – 23,159 ಕೋಟಿ
ಗ್ರಾಮೀಣಾಭಿವೃದ್ಧಿ – 21,160 ಕೋಟಿ
ಒಳಾಡಳಿತ/ಸಾರಿಗೆ – 19,777 ಕೋಟಿ
ನೀರಾವರಿ – 19,179 ಕೋಟಿ
ನಗರಾಭಿವೃದ್ಧಿ- 18,155 ಕೋಟಿ
ಕಂದಾಯ – 16,170 ಕೋಟಿ
ಆರೋಗ್ಯ – 15,145 ಕೋಟಿ
ಸಮಾಜಕಲ್ಯಾಣ – 13,334 ಕೋಟಿ
ಲೋಕೋಪಯೋಗಿ – 10,424 ಕೋಟಿ
ಆಹಾರ ಇಲಾಖೆ – 9963 ಕೋಟಿ
ಕೃಷಿ , ತೋಟಗಾರಿಕೆ – 6,688 ಕೋಟಿ
ಪಶು ಸಂಗೋಪನೆ, ಮೀನುಗಾರಿಕೆ- 3,307 ಕೋಟಿ
ಇತರೆ– 1,24,593 ಕೋಟಿ.