ಕಾರವಾರ : 128 ಕಳ್ಳತನ ಪ್ರಕರಣಗಳ ಆರೋಪಿ ಸಮೀರ್ ಯಾನೆ ಸ್ಯಾಮ್ ಸತ್ಪಾಲ್ ಶರ್ಮ(40) ನನ್ನು ಪಂಜಾಬ್ ನಲ್ಲಿ ಬಂಧಿಸಿದ ಕಾರವಾರ ಪೊಲೀಸರು ನಗರಕ್ಕೆ ಕರೆತಂದು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ.
ಸಮೀರ್ ಶರ್ಮಾ ಕಾರವಾರ ಪ್ರಿಯಾ ಫರ್ನಾಂಡೀಸ್ ಮನೆಯಲ್ಲಿ ಕಳ್ಳತನ ಮಾಡಿದ್ದ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದಾಗ, ಆತ ಅಂತರರಾಜ್ಯ ಕಳ್ಳ ಎಂದು ತಿಳಿದು, ಆತನ ಪತ್ತೆಗೆ ಮೂರು ತಂಡ ರಚಿಸಿದ್ದರು.
ಹೊನ್ನಾವರ ದುರ್ಗಾಕೇರಿಯಲ್ಲಿ ವಾಸವಿದ್ದ ಸಮೀರ್ ,ಬೆಂಗಳೂರು ನಲ್ಲಿ ಸಹ ವಾಸವಿದ್ದ. ಬೆಂಗಳೂರಿನಲ್ಲಿ 108 ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ. ಪಂಜಾಬ್, ಉತ್ತರ ಪ್ರದೇಶ, ಗೋವಾ ರಾಜ್ಯಗಳಲ್ಲಿ ಸಹ ಕಳ್ಳತನ ಮಾಡಿ 128 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಬೆಂಗಳೂರು ನ್ಯಾಯಾಲಯದಲ್ಲಿ 37 ವಾರಂಟಗಳು ಈತನ ಬಂಧನಕ್ಕೆ ಜಾರಿಯಾಗಿದ್ದವು.ಕಾರವಾರದ ಸಿಪಿಐ ರಮೇಶ್ ಹೂಗಾರ, ಪಿಎಸ್ ಐ ರವೀಂದ್ರ ಬಿರಾದಾರ ಹಾಗೂ ಪೊಲೀಸರ ತಂಡ ಅಮೃತಸರದ ಸ್ವರ್ಣಮಂದಿರದ ಬಳಿ ಸಮೀರ ಶರ್ಮಾ ನನ್ನು ನ.11 ಬಂಧಿಸಿದಾಗ ಆತನ ಬಳಿ 3 ಲಕ್ಷ ನಗದು, 34 ಗ್ರಾಂ ಬಂಗಾರ ಸಿಕ್ಕಿತ್ತು. ವಿಚಾರಣೆ ನಡೆಸಿದ ಪೊಲೀಸರು ಇಂದು ನ.25 ರಂದು ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ. ನ್ಯಾಯಾಂಗ ವಶಕ್ಕೆ ಸಮೀರ ಶರ್ಮಾನನ್ನು ನೀಡಲಾಗಿದೆ.