ನಿಷೇಧಿತ PFI ಸಂಘಟನೆಯೊಂದಿಗೆ ಸಂಪರ್ಕ ಹೊಂದಿದವರೆನ್ನಲ್ಲಾದ 14 ಮಂದಿಗೆ ಕೇರಳ ನ್ಯಾಯಾಲಯದಿಂದ ಮರಣದಂಡನೆ – ಪ್ರಕರಣವೇನು?

ಆಲಪ್ಪುಳ:‌2021 ರ ಡಿಸೆಂಬರ್‌ನಲ್ಲಿ ಬಿಜೆಪಿ ಒಬಿಸಿ ವಿಭಾಗದ ನಾಯಕ ರಂಜಿತ್ ಶ್ರೀನಿವಾಸನ್ ಅವರ ಹತ್ಯೆಗೆ ಸಂಬಂಧಿಸಿದಂತೆ ಈಗ ಸದ್ಯ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಗೆ ಸಂಬಂಧಿತ ಎನ್ನಲಾದ 14 ಜನರಿಗೆ ಕೇರಳ ನ್ಯಾಯಾಲಯ ಮಂಗಳವಾರ ಮರಣದಂಡನೆ ವಿಧಿಸಿರುವ ಕುರಿತು ಎನ್.ಡಿ.ಟಿವಿ ವರದಿ ಮಾಡಿದೆ.

ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ವಿ.ಜಿ.ಶ್ರೀದೇವಿ ಅವರು ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ಪ್ರಾಸಿಕ್ಯೂಷನ್ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯನ್ನು ಕೋರಿತ್ತು. ಅವರು “ತರಬೇತಿ ಪಡೆದ ಕೊಲೆಗಾರ ಸ್ಕ್ವಾಡ್” ಎಂದು ವಾದಿಸಲಾಗಿತ್ತು. ಕೊಲೆಯಾದ ಸಂತ್ರಸ್ಥ ತಾಯಿ, ಮಗು ಮತ್ತು ಹೆಂಡತಿಯ ಮುಂದೆ ಕೊಲ್ಲಲ್ಪಟ್ಟಿದ್ದ‌. ಈ ಕ್ರೂರ ಮತ್ತು ಪೈಶಾಚಿಕ ಕೃತ್ಯ “ಅಪರೂಪದಲ್ಲಿ ಅಪರೂಪದ” ಅಪರಾಧದ ವ್ಯಾಪ್ತಿಗೆ ಬರುತ್ತದೆ ಎಂದು ವಾದ ಮಂಡಿಸಲಾಗಿತ್ತು.

ಡಿಸೆಂಬರ್ 19, 2021ರಂದು ಬಿಜೆಪಿ ನಾಯಕ ಹಾಗೂ ವಕೀಲ ರಂಜೀತ್ ಶ್ರೀನಿವಾಸ್ ಅವರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ ನೈಸಮ್, ಅಜ್ಮಲ್, ಅನೂಪ್, ಮುಹಮ್ಮದ್ ಅಸ್ಲಂ, ಅಬ್ದುಲ್ ಕಲಾಂ ಅಲಿಯ ಅಜ್ಮಲ್, ಅನೂಪ್, ಮುಹಮ್ಮದ್ ಅಸ್ಲಂ, ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಅಬ್ದುಲ್ ಕಲಾಮ್, ಸಫ್ರುದ್ಧೀನ್, ಮನ್ಷದ್, ಜಸೀಬ್ ರಾಜಾ, ನವಾಸ್, ಸಮೀರ್, ನಝೀರ್, ಝಾಕಿರ್ ಹುಸೈನ್, ಶಾಜಿ ಪೂವತ್ತುಂಗಲ್ ಹಾಗೂ ಶ್ರೇನಸ್ ಅಶ್ರಫ್ ಸೇರಿದಂತೆ ಎಲ್ಲ ಆರೋಪಿಗಳನ್ನೂ ದೋಷಿಗಳೆಂದು ನ್ಯಾಯಾಲಯವು ಘೋಷಿಸಿದೆ.

ರಜನೀತ್ ಕೊಲೆಯ ಹಿಂದಿನ ರಾತ್ರಿ sdpi ರಾಜ್ಯ ಕಾರ್ಯದರ್ಶಿ ಕೊಲೆ ನಡೆದಿತ್ತು. ಇದಕ್ಕೆ ಪ್ರತೀಕಾರವಾಗಿ ಕೊಲೆ ನಡೆಸಲಾಗಿದೆ ಎಂಬ ಚರ್ಚೆ ನಡೆದಿತ್ತು.

Latest Indian news

Popular Stories