Featured StoryNational

ವಿದೇಶ ಪ್ರವಾಸ ಹೋಗಲು ಕಿಡ್ನಾಪ್ ನಾಟಕ, ತಂದೆಯ ಬಳಿ 30 ಲಕ್ಷ ಬೇಡಿಕೆ ಇಟ್ಟ ಮಗಳು!

ಮಧ್ಯಪ್ರದೇಶ: ವಿದೇಶ ಪ್ರವಾಸಕ್ಕೆ ಹೋಗಲು 21 ವರ್ಷದ ಯುವತಿಯೊಬ್ಬಳು ಅಪಹರಣದ ನಾಟಕವಾಡಿ ತಂದೆಯ ಬಳಿ ಮೂವತ್ತು ಲಕ್ಷಕ್ಕೆ ಬೇಡಿಕೆ ಇಟ್ಟ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಘಟನೆಯ ಸತ್ಯಾಸತ್ಯತೆ ತಿಳಿದ ಪೋಷಕರು ಶಾಕ್ ಗೆ ಒಳಗಾಗಿದ್ದಾರೆ.

ಮಧ್ಯಪ್ರದೇಶದ 21 ವರ್ಷದ ಯುವತಿ ಕಾವ್ಯ ತನ್ನ ಪೋಷಕರ ಬಳಿ ನೀಟ್ ಪರೀಕ್ಷಾ ತಯಾರಿ ನಡೆಸುವುದಾಗಿ ತನ್ನ ತಾಯಿಯ ಜೊತೆ ರಾಜಸ್ಥಾನದ ಕೋಟಕ್ಕೆ ಬಂದು ಅಲ್ಲಿನ ಹಾಸ್ಟೆಲ್ ನಲ್ಲಿ ತಂಗಿದ್ದಳು ಇದಾದ ಬಳಿಕ ತಾಯಿ ಊರಿಗೆ ಮರಳಿದ್ದಾರೆ ಆದರೆ ಕಾವ್ಯ ನೀಟ್ ಪರೀಕ್ಷೆಯ ತಯಾರಿ ನಡೆಸುವ ಬದಲು ಹಾಸ್ಟೆಲ್ ನಲ್ಲಿ ಕೇವಲ ಮೂರೂ ದಿನಗಳ ಕಾಲ ಮಾತ್ರ ಇದ್ದು ಬಳಿಕ ಸ್ನೇಹಿತರೊಂದಿಗೆ ಇಂದೋರ್ ಗೆ ತೆರಳಿದ್ದಾಳೆ ಅಲ್ಲಿ ತನ್ನ ಸ್ನೇಹಿತರ ಜೊತೆ ಉಳಿದುಕೊಂಡು ಆರಾಮದ ಜೀವನ ನಡೆಸುತ್ತಿದ್ದಳು ಇದಾದ ಬಳಿಕ ತನ್ನ ಸ್ನೇಹಿತರ ಜೊತೆಗೆ ವಿದೇಶಕ್ಕೆ ಪ್ರವಾಸ ಹೋಗುವ ಪ್ಲಾನ್ ಮಾಡಿದ್ದಾಳೆ ಆದರೆ ವಿದೇಶಕ್ಕೆ ಹೋಗಲು ಹೆಚ್ಚಿನ ಹಣದ ಅವಶ್ಯಕತೆ ಇದ್ದುದರಿಂದ ಆಕೆ ಮತ್ತು ಆಕೆಯ ಸ್ನೇಹಿತರು ಸೇರಿ ಅಪಹರಣದ ನಾಟವಾಡುವ ವಿಚಾರಕ್ಕೆ ಬಂದಿದ್ದಾರೆ.ಅದರಂತೆ ಕಾವ್ಯ ತನ್ನನ್ನು ಹಗ್ಗದಿಂದ ಕಟ್ಟಿದ ರೀತಿಯಲ್ಲಿ ಫೋಟೋ ತೆಗೆದು ತನ್ನ ತಂದೆ ರಘುವೀರ್ ಧಕಡ್ ಅವರ ವಾಟ್ಸ್ ಆಪ್ ಗೆ ಕಳುಹಿಸಿದ್ದಾಳೆ ಅಲ್ಲದೆ ನಿಮ್ಮ ಮಗಳು ಅಪಹರಣವಾಗಿದ್ದಾಳೆ ಆಕೆಯನ್ನು ವಾಪಸು ಕಳುಹಿಸಬೇಕಾದರೆ ನಮಗೆ 30 ಲಕ್ಷ ಹಣ ನೀಡಬೇಕು ಎಂದು ಮೆಸೇಜ್ ಕಳುಹಿಸಿದ್ದಾರೆ.

ಇತ್ತ ವಾಟ್ಸ್ ಆಪ್ ನೋಡಿದ ಕಾವ್ಯ ತಂದೆಗೆ ಒಮ್ಮೆ ಆಘಾತವಾಗಿದೆ ಕಲಿಯಲು ಹೋದ ತನ್ನ ಮಗಳನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದುಕೊಂಡು ಸೀದಾ ಮಧ್ಯಪ್ರದೇಶದಲ್ಲಿರುವ ಪೊಲೀಸ್ ಠಾಣೆಗೆ ತೆರಳಿ ತನ್ನ ಮಗಳು ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಈ ವಿಚಾರವನ್ನು ರಾಜಸ್ಥಾನದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ ಕೂಡಲೇ ಅಲರ್ಟ್ ಆದ ರಾಜಸ್ಥಾನ ಪೊಲೀಸರು ಆಕೆಯ ಪತ್ತೆಗೆ ಬಲೆ ಬಿಸಿದ್ದಾರೆ ಅಲ್ಲದೆ ಆಕೆ ವಾಸವಿದ್ದ ಹಾಸ್ಟೆಲ್ ಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ ಆಗ ಆಕೆ ಹಾಸ್ಟೆಲ್ ಬಿಟ್ಟಿರುವುದು ಬೆಳಕಿಗೆ ಬಂದಿದೆ, ಇದಾದ ಬಳಿಕ ಪೊಲೀಸರು ಎಲ್ಲಾ ಕಡೆಯ ಸಿಸಿ ಕ್ಯಾಮೆರಾ ಪರಿಶೀಲಿಸಿದ ವೇಳೆ ಅಪಹರಣವಾಗುವ ಮೂರೂ ಗಂಟೆಯ ಮೊದಲು ಜೈಪುರದ ದುರ್ಗಾಪುರದಲ್ಲಿರುವ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾಳೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆಕೆಯ ಸ್ನೇಹಿತರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ ವೇಳೆ ಸತ್ಯ ಬಾಯಿ ಬಿಟ್ಟಿದ್ದಾರೆ, ಅಲ್ಲದೆ ಆಕೆ ಮತ್ತು ಆಕೆಯ ಗೆಳೆಯ ವಿದೇಶಕ್ಕೆ ತಿರುಗಾಡಲು ಹೋಗುವ ಉದ್ದೇಶದಿಂದ ಅಪಹರಣದ ನಾಟಕವಾಡಿ ಮೂವತ್ತು ಲಕ್ಷಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವ ಪ್ಲಾನ್ ಮಾಡಿದ್ದರು ಎಂದು ಸತ್ಯ ಒಪ್ಪಿಕೊಂಡಿದ್ದಾನೆ.

ಈ ವಿಚಾರ ಪೋಷಕರು ತಿಳಿಯುತ್ತಿದ್ದಂತೆ ದಂಗಾಗಿದ್ದಾರೆ, ತಮ್ಮ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆಯಲಿ ಎಂದು ಪೋಷಕರು ಹಣ ಕೂಡಿಟ್ಟು ತಮ್ಮ ಅಗತ್ಯಗಳನ್ನು ಬದಿಗಿಟ್ಟು ಮಕ್ಕಳ ಬೇಕು ಬೇಡಗಳನ್ನು ಈಡೇರಿಸುವ ಪೋಷಕರಿಗೆ ಮಕ್ಕಳು ಈ ರೀತಿ ಮಾಡುತ್ತಿರುವುದು ವಿಪರ್ಯಾಸವೇ ಸರಿ.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button