ಕೊಡಗು: ಜಿಲ್ಲೆಯಾದ್ಯಂತ ಮುಂದುವರಿದ ಭಾರೀ ಮಳೆ ಅಲ್ಲಲ್ಲಿ ಗುಡ್ಡ ಕುಸಿತ – ಮನೆಗಳಿಗೆ ಹಾನಿ

ತುಂಬಿ ಹರಿಯುತ್ತಿದೆ ಕಾವೇರಿ ಹೊಳೆ ಪ್ರವಾಹ ಪರಿಸ್ತಿತಿ ನಿರ್ಮಾಣ ಸಾದ್ಯತೆ

ಭಾಗಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆ: ಭರ್ತಿಯಾದ ತ್ರಿವೇಣಿ ಸಂಗಮ!

ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ನಾಪೋಕ್ಲು ಹಳೆ ರಸ್ತೆ ಮೇಲೆ ಒಂದು ಅಡಿ ನೀರು ನಿಂತಿದೆ. ನಿನ್ನೆ ಸಂಜೆಯಿಂದ ಭಾಗಮಂಡಲ ವ್ಯಾಪ್ತಿಯ ಬಾಚಿ ಮಲೆ, ಪಟ್ಟಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಬಿದ್ದರಿಂದ ಕನ್ನಿಕೆ, ಸುಜೊತಿ,ಹಾಗು ತಲಕಾವೇರಿಯಲ್ಲಿ ಅಧಿಕ ಪ್ರಮಾಣದ ಮಳೆಯಾದ್ದರಿಂದ ತ್ರಿವೇಣಿ ಸಂಗಮದಲ್ಲಿ ಹೆಚ್ಚು ನೀರು ಹರಿಯುತ್ತಿದೆ. ಭಾಗಮಂಡಲ ತಲಕಾವೇರಿಗೆ ಭಕ್ತಾದಿಗಳ ಸಂಖ್ಯೆ ಇಂದು ಬೆಳಿಗ್ಗೆ ಕ್ಷಿಣಿಸಿದೆ. ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಅಭಿವೃದ್ಧಿಪಡಿಸಲಾದ ಉದ್ಯಾನವನ ಸಂಪೂರ್ಣವಾಗಿ ಜಲಾವೃತ ವಾಗಿದೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆ: ಭರ್ತಿಯಾದ ತ್ರಿವೇಣಿ ಸಂಗಮ*

ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ನಾಪೋಕ್ಲು ಹಳೆ ರಸ್ತೆ ಮೇಲೆ ಒಂದು ಅಡಿ ನೀರು ನಿಂತಿದೆ. ನಿನ್ನೆ ಸಂಜೆಯಿಂದ ಭಾಗಮಂಡಲ ವ್ಯಾಪ್ತಿಯ ಬಾಚಿ ಮಲೆ, ಪಟ್ಟಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಬಿದ್ದರಿಂದ ಕನ್ನಿಕೆ, ಸುಜೊತಿ,ಹಾಗು ತಲಕಾವೇರಿಯಲ್ಲಿ ಅಧಿಕ ಪ್ರಮಾಣದ ಮಳೆಯಾದ್ದರಿಂದ ತ್ರಿವೇಣಿ ಸಂಗಮದಲ್ಲಿ ಹೆಚ್ಚು ನೀರು ಹರಿಯುತ್ತಿದೆ. ಭಾಗಮಂಡಲ ತಲಕಾವೇರಿಗೆ ಭಕ್ತಾದಿಗಳ ಸಂಖ್ಯೆ ಇಂದು ಬೆಳಿಗ್ಗೆ ಕ್ಷಿಣಿಸಿದೆ. ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಅಭಿವೃದ್ಧಿಪಡಿಸಲಾದ ಉದ್ಯಾನವನ ಸಂಪೂರ್ಣವಾಗಿ ಜಲಾವೃತ ವಾಗಿದೆ.

ಬಲಮುರಿ ನದಿಯು ಹುಕ್ಕಿ ಹರಿಯುತ್ತಿದೆ:
ನಿನ್ನೆ ರಾತ್ರಿ ಸುರಿದ ಬಾರಿ ಮಳೆಗೆ ಮೂರ್ನಾಡು ಸಮೀಪದ ಬಲಮುರಿಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಬಲಮುರಿಯ ಹಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸುಂದರ ಪರಿಸರದ ನಡುವೆ ಇರುವ ಬಲಮುರಿ ದೇವಾಲಯದ ಸಮೀಪ ಹರಿಯುವ ಕಾವೇರಿ ಹೊಳೆ ನೋಡಲು ಇದೀಗ ವೈಭವಪೂರಿತವಾಗಿದೆ.

ಬೇತ್ರಿಯಲ್ಲಿ ತುಂಬಿ ಹರಿಯುತ್ತಿರುವ ಕಾವೇರಿ:
ಮಡಿಕೇರಿ ವಿರಾಜಪೇಟೆ ರಸ್ತೆಯ ಬೇತ್ರಿಯಲ್ಲಿ ಕಾವೇರಿ ಹೊಳೆ ತುಂಬಿ ಹರಿಯುತ್ತಿದ್ದು, ಕೇವಲ ಮೂರರಿಂದ ನಾಲ್ಕು ಅಡಿಗಳಷ್ಟೇ ಸೇತುವೆಯ ಮೇಲೆ ನೀರು ನಿಲ್ಲಲು ಬಾಕಿ ಇದೆ.
ರೀತಿ ಮಳೆ ಮುಂದುವರೆದರೆ ರಸ್ತೆ ಸಂಪರ್ಕ ಕಡಿತುಕೊಳ್ಳುವ ಸಾಧ್ಯತೆಗಳಿವೆ.

ನದಿ ತೀರ ಪ್ರದೇಶಗಳಲ್ಲಿನ ಜನರಿಗೆ ಮುನ್ನಚ್ಚರಿಕೆ:

‌ಜಿಲ್ಲೆಯ ಕೆಲವೊಂದು ಕಡೆ ಗುಡ್ಡ ಜರಿ ಕುಸಿದಿರುವ ಬಗ್ಗೆ ವರದಿಗಳು ಬರುತ್ತಿದೆ,ನದಿ ತೀರ ಪ್ರದೇಶಗಳ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು ಸುರಕ್ಷಿತ ಸ್ಥಳಕ್ಕೆ ತೆರಳಲು ಜಿಲಾಡಳಿತ ಕ್ರಮ ಕೈ ಗೊಂಡಿದೆ.

ಇನ್ನೂ ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗಿದ್ದು ಇಂದು 200 ಕ್ಯೂಸೆಕ್ಸ್ ನೀರನ್ನು ಬಿಡಲಾಗಿದೆ…
ಜಿಲ್ಕಾಡಳಿತ ಪರಿಸ್ಥಿತಿಯನ್ನು ನಿಭಾಯಿಸಲು ಸರ್ವ ಸಜ್ಕಾಗಿದೆ ಪರಿಹಾರ ಕಾರ್ಯಕ್ಕೆ ಎನ್ ಡಿ ಆರ್ ಎಪ್ ತಂಡವು ಸಜ್ಜಾಗಿದ್ದು ಯಾವುದೇ ಆತಂಕ ಪಡುವ ಆವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ವೆಂಕಟ.ರಾಜಾ ತಿಳಿಸಿದ್ದಾರೆ.

IMG 20240627 WA0056 Featured Story, Climate and environment, Kodagu IMG 20240627 WA0055 Featured Story, Climate and environment, Kodagu IMG 20240627 WA0054 1 Featured Story, Climate and environment, Kodagu

ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ:ನಾಲ್ಕು ಮನೆಗಳಿಗೆ ಹಾನಿ.

ಮಡಿಕೇರಿಯ ತ್ಯಾಗರಾಜ ಕಾಲೊನಿ ಯಲ್ಲಿ ಅಲ್ಪ ಪ್ರಮಾಣದ ಬರೆ ಕುಸಿತ .,ನಾಲ್ಕು ಮನೆಗಳಿಗೆ ಹಾನಿಯಾಗಿದೆ, ತಡ ರಾತ್ರಿ ಒಂದು ಗಂಟೆ ಸಮಯದಲ್ಲಿ ಭಾರೀ ಶಬ್ದದೊಂದಿಗೆ ತಡೆಗೋಡೆ ಬಿದ್ದಿದ್ದು ಮನೆ ಮಂದಿ ಹಾಗೂ ಅಕ್ಕಪಕ್ಕದ ಜನರು ಭಯ ಬೀತರಾಗಿದ್ದಾರೆ,

ನಗರ ಸಭೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ವಿವರವನ್ನು ಪಡೆದು ಕೊಂಡಿದ್ದಾರೆ.ಉಮೇಶ್, ಮೊಯ್ದು, ಶರೀಪ್ ಹಾಗೂ ಮೈಮುನಾ ಎಂಬವರ ಮನೆಗಳಿಗೆ ತಡೆಗೋಡೆ ಕುಸಿತದಿಂದ ನಷ್ಟ ಉಂಟಾಗಿದೆ

Latest Indian news

Popular Stories