ಭೂ ವಿವಾದ ಪ್ರಕರಣ | ಸಿದ್ದಲಿಂಗ ಸ್ವಾಮೀಜಿಗೆ ನೋಟಿಸ್ ಜಾರಿ

ಹುಮನಾಬಾದ್: ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋರ್ಜರಿ ಆರೋಪದಡಿ ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮೀಜಿ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

2017ರ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ (ಕೆಎಟಿ) ಅಧಿಕೃತ ತೀರ್ಪನ್ನು ಸಿದ್ದಲಿಂಗ ಸ್ವಾಮಿ ಅವರು ಫೋರ್ಜರಿ ಮಾಡಿ ಅಧಿಕೃತ ತೀರ್ಪಿನಲ್ಲಿ ಇಲ್ಲದೆ ಇರುವ ಖಂಡಿಕೆಯನ್ನು ಸೇರ್ಪಡೆ ಮಾಡಿದ ಫೋರ್ಜರಿ ದಾಖಲೆಗಳನ್ನು ಸಲ್ಲಿಸಿರುವ ಬಗ್ಗೆ ಅಫೀಲುದಾರ ಚಂದ್ರಕಾಂತ ಬಿರಾದಾರ ನ್ಯಾಯಾಲಯದ ಗಮನ ಸೆಳೆದಿದ್ದರು.

ನಂತರ ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಸ್ವಾಮೀಜಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಹುಮನಾಬಾದ್ ತಹಶೀಲ್ದಾರ್‌ಗೆ ಸೂಚಿಸಿದ್ದರು. ಬಳಿಕ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಈ ಪ್ರಕರಣದ ತನಿಖೆಗೆ ಸ್ವಾಮೀಜಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ವಿರುದ್ಧ ಚಂದ್ರಕಾಂತ ಬಿರಾದಾರ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇವರ ಪರ ವಕೀಲ ಅನೀಲ ನಿಶಾನಿ ಸುಪ್ರೀಂ ಕೋರ್ಟ್ ಗಮನ ಸೇಳೆದು ಪ್ರಕರಣದ ವಿವರಣೆ ನೀಡಿದ ನಂತರ ಸಿದ್ದಲಿಂಗ ಸ್ವಾಮಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

Latest Indian news

Popular Stories