ಗೋವಾ ವಿಮಾನ ನಿಲ್ದಾಣದ ರನ್ ವೇ ಗೆ ಬಡಿದ ಸಿಡಿಲು: 6 ವಿಮಾನಗಳ ಮಾರ್ಗ ಬದಲು!

ಪಣಜಿ: ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (MIA) ರನ್ ವೇ ಗೆ ಸಿಡಿಲು ಬಡಿದ ಪರಿಣಾಮ 6 ವಿಮಾನಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.

ಸಿಡಿಲು ಬಡಿದ ಪರಿಣಾಮ ರನ್ ವೇ ಅಂಚಿನ ದೀಪಗಳಿಗೆ ಹಾನಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಗೋವಾದಲ್ಲಿರುವ ಮೋಪಾದಲ್ಲಿನ ವಿಮಾನ ನಿಲ್ದಾಣಕ್ಕೆ ಸಿಡಿಲು ಬಡಿದು ಈ ಘಟನೆ ನಡೆದಿದೆ ಎಂದು ಎಂಐಎ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಂಐಎ ಎನ್ಒಟಿಎಎಂ (ನೊಟೀಸ್ ಟು ಏರ್ ಮನ್) ಪ್ರಕ್ರಿಯೆ ಕೈಗೊಂಡು ಸಮಸ್ಯೆಯನ್ನು ದುರಸ್ತಿ ಮಾಡಿದ್ದಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ದುರಸ್ತಿ ಹಿನ್ನೆಲೆಯಲ್ಲಿ 6 ವಿಮಾನಗಳನ್ನು ಹತ್ತಿರದ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಇಂತಹ ನೈಸರ್ಗಿಕ ವಿಕೋಪಗಳು ಮಾನವ ನಿಯಂತ್ರಣವನ್ನು ಮೀರಿವೆ” ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಹೇಳಿದ್ದಾರೆ. MIA ಹೊರತುಪಡಿಸಿ, ಕರಾವಳಿ ರಾಜ್ಯವು ದಕ್ಷಿಣ ಗೋವಾದ ದಾಬೋಲಿಮ್‌ನಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ಹೊಂದಿದೆ.

Latest Indian news

Popular Stories