ಮೀನಿನ ಲಾರಿ ಅಡ್ಡ ಹಾಕಿ ಸೇಲಂನಲ್ಲಿ ಲೂಟಿ ; ಕುಂದಾಪುರದಲ್ಲಿ ಪ್ರಕರಣ ದಾಖಲು

ಕುಂದಾಪುರ: ಮೀನಿನ ಲಾರಿಯನ್ನು ಅಡ್ಡ ಹಾಕಿ ಆಗಂತುಕರು ಲೂಟಿ ಹೊಡೆದ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕ ಬಶೀರ್‌ (35), ವಾಲಗಾಟ್‌ ಕೇರಳ ರಾಜ್ಯ ಇವರು KA-20-D-7988 ಇನ್ಸೂಲೇಟರ್‌ ವಾಹನದ ಚಾಲಕರಾಗಿದ್ದು, ದಿನಾಂಕ 02/07/2024 ರಂದು ಸಂಜೆ 03:00 ಗಂಟೆ ವೇಳೆಗೆ ಚೆನೈನ ಪುಲಿಕಾಟ್‌ ಎಂಬಲ್ಲಿಂದ ಮೀನನ್ನು ಲೋಡ್‌ ಮಾಡಿಕೊಂಡು ಕೇರಳದ ಕಾಲಿಕಟ್‌ ಗೆ ಹೊರಟಿದ್ದು ದಾರಿ ಮಧ್ಯ ಸೇಲಂ ನ ಉಳನ್ದೂರು ಎಂಬಲ್ಲಿ ಬರುವಾಗ 3 ಮೋಟಾರ್‌ ಸೈಕಲಿನಲ್ಲಿ 5 ಜನ ವ್ಯಕ್ತಿಗಳು ವಾಹನವನ್ನು ಹಿಂಬಾಲಿಸಿಕೊಂಡು ಬಂದು ಇನ್ಸೂಲೇಟರ್‌ ವಾಹನವನ್ನು ನಿಲ್ಲಿಸಿ ವಾಹನದೊಳಗೆ ಬಂದು ಓರ್ವ ಚಾಲಕನಿಗೆ ಕೆನ್ನಗೆ ಹೊಡೆದು ಇನ್ನೊಬ್ಬನ್ನು ಚೂರಿಯಿಂದ ಹಣೆಯ ಬಲಭಾಗಕ್ಕೆ ಚೂರಿಯಿಂದ ತಾಗಿಸಿ ರಕ್ತಗಾಯ ಉಂಟು ಮಾಡಿದ್ದಾನೆ.

ಸಂತ್ರಸ್ಥ ಚಾಲಕ ಸ್ವಲ್ಪ ಮುಂದೆ ವಾಹನ ಚಲಾಯಿಸಿಕೊಂಡು ಹೋದಾಗ ಅಲ್ಲಿ ಆರೋಪಿತರೆಲ್ಲರೂ ಸೇರಿಕೊಂಡು ಹಣ ನೀಡುವಂತೆ ಹೇಳಿ ಮೀನಿನ ಪಾರ್ಟಿಯವರಿಂದ 10,000/- ರೂಪಾಯಿ ಹಣವನ್ನು ಹಾಕಿಸಿದ್ದು ಅಲ್ಲದೇ ಸಂತ್ರಸ್ಥರ ಬಳಿಯಿದ್ದ ನಗದು 15,000/- ರೂಪಾಯಿ ತೆಗೆದುಕೊಂಡು ಮತ್ತು1,200/- ರೂಪಾಯಿ ಗೂಗಲ್‌ ಪೇ ಮಾಡಿಸಿಕೊಂಡಿದ್ದಾರೆ.

ಅಲ್ಲದೇ ಜೀವ ಬೆದರಿಕೆ ಹಾಕಿದ್ದು, ಹೆದರಿ ವಾಹನವನ್ನು ಕೇರಳ ಮಲಪ್ಪುರಂ ನ ಮಂಜೇರಿಯಲ್ಲಿ ಇಟ್ಟು ರೈಲಿನ ಮೂಲಕ ಕುಂದಾಪುರದಕ್ಕೆ ಬಂದು ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2024 ಕಲಂ: 126 (2), 115 (2), 118 (1), 351 (3), 310 (2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories