ಮಧ್ಯಪ್ರದೇಶ: ಛತ್ತರ್‌ಪುರದಲ್ಲಿ ಬಿಎಸ್‌ಪಿ ನಾಯಕನಿಗೆ ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿ

ಛತ್ತರ್‌ಪುರ: ಮಧ್ಯಪ್ರದೇಶದಲ್ಲಿ ನಡೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕನನ್ನು ರಾಜ್ಯದ ಛತ್ತರ್‌ಪುರ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ರಾತ್ರಿ ಸಾಗರ್ ರಸ್ತೆಯ ಬಳಿ ಮಹೇಂದ್ರ ಗುಪ್ತಾ ಅವರ ತಲೆಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಂಘಿ ತಿಳಿಸಿದ್ದಾರೆ.

‘ಗುಪ್ತಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ಎಸ್ಪಿ ಹೇಳಿದರು.

ಇಶಾನಗರ ಪಟ್ಟಣದ ನಿವಾಸಿಯಾಗಿರುವ ಗುಪ್ತಾ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜಾವರ್ ಕ್ಷೇತ್ರದಿಂದ ಬಿಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ 10,400 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದರು.

ಮೋಟಾರ್ ಸೈಕಲ್‌ನಲ್ಲಿ ಬಂದ ವ್ಯಕ್ತಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ತನ್ನ ರೈಫಲ್ ಅನ್ನು ಲೋಡ್ ಮಾಡುವ ಹೊತ್ತಿಗೆ ದಾಳಿಕೋರ ಅಲ್ಲಿಂದ ಪರಾರಿಯಾದನು. ದಾಳಿಕೋರನನ್ನು ನಾನು ನೋಡಿದ್ದು, ಆತನನ್ನು ಗುರುತಿಸಬಲ್ಲೆ ಎಂದು ಗುಪ್ತಾ ಅವರ ಖಾಸಗಿ ಭದ್ರತಾ ಸಿಬ್ಬಂದಿ ಅಬ್ದುಲ್ ಮನ್ಸೂರಿ ಹೇಳಿದರು.

ಘಟನೆ ನಡೆದಾಗ ಬಿಎಸ್‌ಪಿ ನಾಯಕ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಛತ್ತರ್‌ಪುರಕ್ಕೆ ಬಂದಿದ್ದರು.

Latest Indian news

Popular Stories