ಅಲೆ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿಕೊಂಡ ಮಲ್ಪೆ ಬೋಟ್

ಕಾರವಾರ: ಅರಬ್ಬೀ ಸಮುದ್ರದಲ್ಲಿ (Arabian Sea) ವಾಯುಭಾರ ಕುಸಿತದಿಂದ ಮೀನುಗಾರಿಕೆಗೆ (Fishing) ತೆರಳಿದ್ದ ಮಲ್ಪೆ ಬೋಟ್‌ಗೆ (Malpe Boat) ಭಾರೀ ಅಲೆಗಳ ಕಾರಣದಿಂದ ಹಾನಿಯಾಗಿ ಸಮುದ್ರಭಾಗದಲ್ಲಿ ಸಿಲುಕಿಕೊಂಡಿದೆ.

ಭಾರೀ ಅಲೆಗಳ ಕಾರಣದಿಂದ ಮಲ್ಪೆ ಮೂಲದ ಬೋಟ್ ಫ್ಯಾನ್‌ಗೆ ಮೀನಿನ ಬಲೆ ಸಿಲುಕಿತ್ತು. ಬಲೆ‌ ಸಿಲುಕಿಕೊಂಡ ಕಾರಣ ಮುಂದೆ ಸಾಗಲಾಗದೇ ಮುಳುಗುವ ಸ್ಥಿತಿಯಲ್ಲಿದ್ದ ಬೋಟನ್ನು ಕೂಡಲೇ ಮೀನುಗಾರರನ್ನು ರಕ್ಷಿಸಿ ಭಟ್ಕಳ ಮೂಲದ ಬೋಟ್‌ಗೆ ಹಗ್ಗ ಕಟ್ಟಿ ಎಳೆದು ತರಲಾಗುತ್ತಿತ್ತು.

ತೀರ ಪ್ರದೇಶಕ್ಕೆ ಎಳೆದು ತರುವ ಮುನ್ನವೇ ಹಗ್ಗ ತುಂಡಾಗಿ ಭಟ್ಕಳದ (Bhatkal) ಹೆಬಳೆ ಪಂಚಾಯತ್‌ನ ತೆಂಗಿನಗುಂಡಿ ವ್ಯಾಪ್ತಿಯ ಸಮುದ್ರ ತೀರದ ಕಲ್ಲಿನ ರಾಶಿಯಲ್ಲಿ ಸದ್ಯ ಬೋಟ್‌ ಸಿಲುಕಿಕೊಂಡಿದೆ.

ಅಲೆಗಳ ಅಬ್ಬರ ಹೆಚ್ಚಾಗ್ಗಿರುವುದರಿಂದ ಬೋಟ್‌ ಅನ್ನು ಹೊರತರಲಾರದೇ ಹಾಗೆಯೇ ಬಿಡಲಾಗಿದೆ.

Latest Indian news

Popular Stories