ಛತ್ತೀಸ್‌ಗಢದಲ್ಲಿ ಶಾರುಖ್ ಖಾನ್‌ಗೆ ಬೆದರಿಕೆಯೊಡ್ಡಿದ ಆರೋಪಿ ಬಂಧನ

ಮುಂಬೈ:
ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. 59 ವರ್ಷದ ನಟನಿಗೆ ಬೆದರಿಕೆ ಕರೆ ಮಾಡಿ ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಕ್ಕಾಗಿ ಮೊಹಮ್ಮದ್ ಫೈಜಾನ್ ಖಾನ್ ಎಂಬ ವಕೀಲರನ್ನು ಛತ್ತೀಸ್‌ಗಢದ ರಾಯ್‌ಪುರದ ಅವರ ನಿವಾಸದಿಂದ ಬಂಧಿಸಲಾಗಿದೆ.
ಮುಂಬೈ ಪೊಲೀಸರ ಮುಂದೆ ಹಾಜರಾಗಲು ವಿಫಲವಾದ ನಂತರ ಅವರನ್ನು ಬಂಧಿಸಲಾಯಿತು.
ಕಳೆದ ವಾರ ಬೆದರಿಕೆ ಕರೆ ಮಾಡಲು ಬಳಸಿದ್ದ ತನ್ನ ಮೊಬೈಲ್ ಫೋನ್ ಕಳವಾಗಿತ್ತು ಎಂದು ಫೈಜಾನ್ ಈ ಹಿಂದೆ ಹೇಳಿದ್ದರು. ನವೆಂಬರ್ 2ರಂದು ಪೊಲೀಸ್ ಕೇಸ್ ಹಾಕಿದ್ದೇನೆ ಎಂದೂ ಹೇಳಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) 308 (4) (ಸಾವಿನ ಬೆದರಿಕೆ ಅಥವಾ ಗಂಭೀರ ಗಾಯದ ಸುಲಿಗೆ) ಮತ್ತು 351 (3) (4) (ಅಪರಾಧ ಬೆದರಿಕೆ) ಅಡಿಯಲ್ಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರ ಹೆಸರಿನಲ್ಲಿ ನೋಂದಾಯಿಸಲಾದ ಫೋನ್ ಸಂಖ್ಯೆಯಿಂದ ಕರೆ ಹೋಗಿತ್ತು. ಶಾರೂಕ್ ಖಾನ್ ಅವರಿಗೆ ಕಳೆದ ಅಕ್ಟೋಬರ್ ನಲ್ಲಿ ಬೆದರಿಕೆ ಕರೆ ಹೋಗಿತ್ತು.