ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್​​ಗು, ಬೆಂಗಳೂರು ರಾಮೇಶ್ವರಂ ಕೆಫೆ ಸ್ಪೋಟಕ್ಕೂ ಸಾಮ್ಯತೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಆರೋಪಿ ಮಾಸ್ಕ್​, ಟೋಪಿ​ ಹಾಕಿಕೊಂಡು ಬಂದು ಸ್ಫೋಟಿಸಿದ್ದಾನೆ. ಹೋಟೆಲ್​​ನಲ್ಲಿ ತಿಂಡಿಯ ಟೋಕನ್​ ತೆಗೆದುಕೊಂಡಿದ್ದಾನೆ. ನಂತರ ಹೋಟೆಲ್​​ನಲ್ಲಿ ಕುಳಿತು ಟೈಮರ್​ ಫಿಕ್ಸ್​ ಮಾಡಿದ್ದಾನೆ. ಟೈಮರ್ ಫಿಕ್ಸ್​ ಮಾಡಿ ಇಟ್ಟು ಹೋಟೆಲ್​​ನಿಂದ ಹೊರಹೋಗಿದ್ದಾನೆ​. ಬಳಿಕ ಬ್ಲಾಸ್ಟ್​ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್​​ಗು (Cooker Bomb Blast), ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬ್ಲಾಸ್ಟ್​​ಗೂ (Bengaluru Rameshwaram Cafe Bomb Blast) ಸಾಮ್ಯತೆ ಇಲ್ಲ. ಮಂಗಳೂರಿನಲ್ಲಿ ಕುಕ್ಕರನಲ್ಲಿ ಆದ ಬ್ಲಾಸ್ಟ್, ಬೆಂಗಳೂರಿನಲ್ಲಿ ಯಾವ ಕುಕ್ಕರ್​​ನಲ್ಲೂ ಬ್ಲಾಸ್ಟ್ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

ಆರೋಪಿ ಟೋಪಿ ಹಾಕಿಕೊಂಡು ಬಂದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೋಟೆಲ್​​ನಲ್ಲಿ ತಿಂಡಿಯ ಟೋಕನ್​ ತೆಗೆದುಕೊಂಡಿದ್ದಾನೆ. ನಂತರ ಹೋಟೆಲ್​​ನಲ್ಲಿ ಕುಳಿತು ಟೈಮರ್​ ಫಿಕ್ಸ್​ ಮಾಡಿದ್ದಾನೆ. ಟೈಮರ್ ಫಿಕ್ಸ್​ ಮಾಡಿ ಇಟ್ಟು ಹೋಟೆಲ್​​ನಿಂದ ಹೊರಹೋಗಿದ್ದಾನೆ​. ಬಳಿಕ ಬ್ಲಾಸ್ಟ್​ ಆಗಿದೆ ಎಂದರು.

ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಇದು ಓರ್ವ ವ್ಯಕ್ತಿಯ ಕೃತ್ಯವಾ ಅಥವಾ ಸಂಘಟನೆಯ ಕೃತ್ಯವಾ ಗೊತ್ತಿಲ್ಲ. ಭಯೋತ್ಪಾದಕ ಕೃತ್ಯನಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ್​ ಜಿಂದಾಬಾದ್ ಘೋಷಣೆ ಆರೋಪಕ್ಕೆ ಸಂಬಂಧಿಸಿದಂತೆ ಇನ್ನೂ ಎಫ್ಎಸ್ಎಲ್ ವರದಿ ಬಂದಿಲ್ಲ. ತಪ್ಪು ಸಾಬೀತಾದರೆ ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ವರದಿ ಬರದೆ ಆರೋಪಗಳಿಗೆ ಏನೂ ಉತ್ತರ ಕೊಡಲಿ? ಎಂದರು

Latest Indian news

Popular Stories