ಮಂಗಳೂರು: ರಾಜ್ಯಪಾಲರ ‘ವರ್ತನೆ’ಗೆ ಘಟಿಕೋತ್ಸವದ ವೇದಿಕೆಯಲ್ಲೇ ಗದ್ಗತಿತರಾದ ಉಪಕುಲಪತಿ

ಮಂಗಳೂರು: ನಗರದ ಹೊರವಲಯದಲ್ಲಿರುವ ಮಂಗಳೂರು ವಿಶ್ವ ವಿದ್ಯಾನಿಲಯದ 42ನೇ ಘಟಿಕೋತ್ಸವ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕಾರ್ಯಕ್ರಮದಲ್ಲಿ ವರ್ತಿಸಿದ ರೀತಿ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯಪಾಲರ ನಡಯ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಶಿಷ್ಟಾಚಾರದಂತೆ ನಡೆಯುವ ಘಟಿಕೋತ್ಸವ ಕಾರ್ಯಕ್ರಮವನ್ನು ರಾಜ್ಯಪಾಲರು ಈ‌ ಬಾರಿ ತಮ್ಮದೇ ಹೊಸ ನಿಯಮಗಳೊಂದಿಗೆ ನಡೆಸಿಕೊಟ್ಟಿದ್ದಾರೆ. ಇದರಿಂದ ಅಕ್ಷರಶಃ ವಿವಿಯ ಉಪಕುಲಪತಿಗಳೇ‌ ಗದ್ಗತಿತರಾದರೆ, ಇತರ ಸಿಬ್ಬಂದಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

1001252248 Featured Story, Dakshina Kannada

ರಾಜ್ಯಪಾಲರು, ರಾಜ್ಯಪಾಲರ ಭದ್ರತಾ ಸಿಬ್ಬಂದಿಯ ಎಡವಟ್ಟಿನಿಂದ ಇಡೀ ಕಾರ್ಯಕ್ರಮವೇ ಗೊಂದಲದ ಗೂಡಾಗಿತ್ತು.

ನಾಡಗೀತೆ ಮತ್ತು ವಿವಿಯ ಗೀತೆಯೊಂದಿಗೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಗುವುದು ಘಟಿಕೋತ್ಸವದ ಸಂಪ್ರದಾಯ. ಇದೇ ರೀತಿ ಸಿದ್ಧತೆಯೂ ಆಗಿತ್ತು. ಆದರೆ ವೇದಿಕೆಗೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಡಗೀತೆ ಮತ್ತು ವಿಶ್ವವಿದ್ಯಾನಿಲಯದ ಗೀತೆಗೆ ಮೊದಲೇ ರಾಷ್ಟ್ರಗೀತೆ ನುಡಿಸುವಂತೆ ಸೂಚಿಸಿದರು. ಇದು ಏಕಾಏಕಿ ಗೊಂದಲಕ್ಕೆ ಕಾರಣವಾಯಿತು. ಈ ಗೀತೆ ಹಾಡಲು ತಯಾರಾಗಿ ಬಂದಿದ್ದ ವಿದ್ಯಾರ್ಥಿಗಳು ಕೆಲ ಕಾಲ ವಿಚಲಿತರಾದರು.
ಶಿಷ್ಟಾಚಾರದೊಂದಿಗೆ ಕಾರ್ಯಕ್ರಮ ನಡೆಸು ಮೊದಲೇ ರೂಪುರೇಷೆ ಸಿದ್ದಪಡಿಸಲಾಗಿತ್ತು. ಆದರೆ ವೇದಿಕೆಯಲ್ಲಿ ರಾಜ್ಯಪಾಲರು, ಅವರ ಭದ್ರತಾ ಸಿಬ್ಬಂದಿ ಅವುಗಳನ್ನು ಬದಲಾಯಿಸಲು ಸೂಚನೆ ನೀಡಿದ ಪರಿಣಾಮ ಅಲ್ಲಿ ಬಹಳಷ್ಟು ಗೊಂದಲ ಉಂಟಾಗಿತ್ತು. ಗೌರವ ಡಾಕ್ಟರೇಟ್ ಪ್ರದಾನ, ಪದವಿ ಪ್ರಮಾಣ ಮಾಡುವ ಸಂದರ್ಭದಲ್ಲೂ ಮಂಗಳೂರು ವಿಶ್ವವಿದ್ಯಾನಿಲಯ ಈ ಮೊದಲ ವ್ಯವಸ್ಥೆಯನ್ನು ವೇದಿಕೆಯಲ್ಲಿ ಬದಲಾಯಿಸಲಾಯಿತು. ಈ ನಡುವೆ ರಾಜ್ಯಪಾಲರು ಮಂಗಳೂರು ವಿವಿಯ ಉಪ ಕುಲಪತಿ ಡಾ. ಪಿ ಎಲ್ ಧರ್ಮ ಅವರನ್ನು ತರಾಟೆಗೆ ತೆಗೆದುಕೊಂಡರು‌. ಇದರಿಂದ ಕಸಿವಿಸಿಗೊಂಡ ಕುಲಪತಿಗಳು ವೇದಿಕೆಯಲ್ಲಿಯೇ ಗದ್ಗದಿತರಾದರು.


ಇನ್ನು ಸಂಶೋಧನಾ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಪದವಿ ಪ್ರದಾನ ಮಾಡುವುದು ವಾಡಿಕೆ. ಆದರೆ ರಾಜ್ಯಪಾಲರು ಎಲ್ಲರನ್ನೂ ಒಟ್ಟಿಗೇ ವೇದಿಕೆಗೆ ಕರೆದು ಫೋಟೋ ತೆಗೆಸಿಕೊಂಡರು.


ಒಟ್ಟಿನಲ್ಲಿ ತನ್ನದೇ ನೀತಿ ನಿಯಮಗಳನ್ನು ರೂಪಿಸಿ ಅದನ್ನು ಅನುಷ್ಟಾನಕ್ಕೆ ತಂದು ಇಡೀ ಕಾರ್ಯಕ್ರಮವನ್ನೇ ಗೊಂದಲದ ಗೂಡಾಗಿಸಿದ ರಾಜ್ಯಪಾಲರ ವರ್ತನೆ ಮಾತ್ರ ಎಲ್ಲರ ಟೀಕೆಗೆ ಗುರಿಯಾಗಿತ್ತು.

Latest Indian news

Popular Stories