ಮಂಗಳೂರು: ಚೂರಿ ಇರಿದ ಪ್ರಕರಣದಲ್ಲಿ ಐವರ ಬಂಧನ: ಮಸೀದಿ ಮುಂಭಾಗ ವಿಜಯೋತ್ಸವ ಆಚರಿಸಿದ್ದಕ್ಕೆ ಮತ್ತೊಂದು ಪ್ರಕರಣ ದಾಖಲು

ಮಂಗಳೂರು: ಮಸೀದಿ‌ ಮುಂಭಾಗ ವಿಜಯೋತ್ಸವ ಆಚರಣೆ ಆರೋಪಿಸಿ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದ ಪ್ರಕರಣ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಮುಹಮ್ಮದ್ ಶಾಕಿರ್ (28), ಅಬ್ದುಲ್ ರಝಾಕ್ (40), ಅಬೂಬಕರ್ ಸಿದ್ದೀಕ್ (35), ಸವಾದ್ (18) ಹಫೀಝ್ (24) ಪ್ರಕರಣ ಸಂಬಂಧ ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಇದೇ ಪ್ರಕರಣ ಸಂಬಂಧ ಮಸೀದಿ ಮುಂಭಾಗ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದ ಆರೋಪದಲ್ಲಿ ಐದು ಮಂದಿಯ ವಿರುದ್ಧ ಪ್ರಕಣ ದಾಖಲಾಗಿದೆ.

ಸುರೇಶ್, ವಿನಯ್, ಸುಭಾಷ್, ರಂಜಿತ್ ಮತ್ತು ಧನಂಜಯ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆದಿತ್ಯವಾರ ರಾತ್ರಿ 8.50ರ ಸುಮಾರಿಗೆ ಮಸೀದಿ ಮುಂಭಾಗ ಆರೋಪಿತರು ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ಮಾಡಿದ್ದಲ್ಲದೇ ಮಸೀದಿ ಮುಂಭಾಗ ನಿಂತವರನ್ನು ನಿಂದಿಸಿದ್ದಾರೆಂದು ಘಟನೆ ನಡೆದ ಬೋಳಿಯಾರು ಮಸೀದಿ ಅಧ್ಯಕ್ಷರು ದೂರಿನಲ್ಲಿ ತಿಳಿಸಿದ್ದಾರೆ.

Latest Indian news

Popular Stories