ಮಂಗಳೂರು: ಫಾತಿಮಾ ರಾಲಿಯಾ ಸೇರಿದಂತೆ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

ಮಂಗಳೂರು, ಮೇ 19: ಬೆಂಗಳೂರಿನ ಕರ್ನಾಟಕ ವೇದಿಕೆಯು 2023ನೇ ಸಾಲಿನ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿಯನ್ನು ಯುವ ಲೇಖಕಿ ಫಾತಿಮಾ ರಾಲಿಯಾ ಸೇರಿದಂತೆ ಆರು ಮಂದಿಗೆ ಪ್ರದಾನ ಮಾಡಲಾಗಿದೆ.

ಡಾ.ಸಿ.ಸೋಮಶೇಖರ್ ಹಾಗೂ ಸರ್ವಮಂಗಳ ದತ್ತಿ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಮೇ 31 ರಂದು ಬೆಂಗಳೂರಿನಲ್ಲಿ ಪ್ರದಾನ ಸಮಾರಂಭ ನಡೆಯಲಿದೆ.

ಡಾ.ಎಚ್.ಎಸ್.ಎಂ.ಪ್ರಕಾಶ್ ಅವರ ಅನುವಾದಿತ ಪುಸ್ತಕ ‘ನಮ್ಮಂತ ಬಲ್ಲಿದರವರು’, ಪ್ರೊ.ಎಚ್.ಟಿ.ಪೋತೆ ಅವರ ‘ಬಾಬಾ ಸಾಹೇಬರ ಲಂಡನ್ ಮನೆಯಲ್ಲಿ’ ಪ್ರವಾಸ ಕಥನ, ಫಾತಿಮಾ ರಾಲಿಯಾ ಅವರ ಕಥಾ ಸಂಕಲನ ‘ಒಡೆಯಲಾರದ ಒಡಪು’ ಹಾಗೂ ಸಂತೋಷ ನಾಯ್ಕ ಅವರಿಂದ ಹೊಸ ವಿಳಾಸದ ಹೆಜ್ಜೆಗಳು ಕವನ ಸಂಕಲನ ಪ್ರಶಸ್ತಿಗೆ ಆಯ್ಕೆಯಾದ ಕೃತಿಗಳು.

ಇಂದಿರಾ ಕೃಷ್ಣಪ್ಪ ಅವರ ಜೀವನ ಚರಿತ್ರೆ ‘ಸಾವಿತ್ರಿ ಬಾಪುಲೆ’ ಮತ್ತು ‘ಗವಿ ಮಾರ್ಗ’ ಗದ್ಯ ಸಂಕಲನದ ಡಾ.ಎಂ.ಎಸ್.ಮಣಿ ಅವರಿಗೆ ಡಾ.ಸಿ.ಸೋಮಶೇಖರ್ ಮತ್ತು ಸರ್ವಮಂಗಳ ದತ್ತಿ ಪ್ರಶಸ್ತಿಗಳು ಲಭಿಸಿವೆ.

ಪ್ರಶಸ್ತಿಯು ರೂ 5,000 ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಕರ್ನಾಟಕ ಮಹಿಳಾ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪಾ, ಸಾಹಿತಿಗಳಾದ ದ್ವಾರನಕುಂಟೆ ಪಾತಣ್ಣ, ಡಾ.ಸತ್ಯಮಂಗಲ ಮಹದೇವ ತೀರ್ಪುಗಾರರಾಗಿದ್ದರು.

 

Latest Indian news

Popular Stories