ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಕಚೇರಿ ಮೇಲೆ ಗುಂಪಿನಿಂದ ದಾಳಿ; ಐವರು ಪೊಲೀಸರಿಗೆ ಗಾಯ!

ಗುವಾಹಟಿ: ತುರಾದಲ್ಲಿರುವ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರ ಕಚೇರಿಯನ್ನು ಗುರಿಯಾಗಿಸಿಕೊಂಡು ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು ತುರಾ ಪಟ್ಟಣದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.

ಮುಖ್ಯಮಂತ್ರಿ ಕೊನ್ರಾಡ್ ಅವರು ಸಿಎಂಒ ಕಚೇರಿ ತುರಾದಲ್ಲಿ 3 ಗಂಟೆಗೂ ಹೆಚ್ಚು ಕಾಲ ಧರಣಿ ನಿರತ ಸಂಘಟನೆಗಳೊಂದಿಗೆ ಶಾಂತಿಯುತ ಚರ್ಚೆ ನಡೆಸುತ್ತಿದ್ದರು. ಅಷ್ಟರಲ್ಲಿ ಏಕಾಏಕಿ ಸಿಎಂಒ ತುರಾ ಬಳಿ ಸಾವಿರಾರು ಜನ ಗುಂಪು ಬಂದು ಕಲ್ಲು ತೂರಾಟ ಆರಂಭಿಸಿದರು.

ಐವರು ಪೊಲೀಸರು ಗಾಯ
ಪ್ರತೀಕಾರವಾಗಿ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಲಾಯಿತು. ಘಟನೆ ಮತ್ತು ಗಲಾಟೆಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ. ಸಿಎಂಒ ಟುರಾದ ಕಿಟಕಿಗಳ ಮೇಲೂ ಕಲ್ಲು ತೂರಾಟ ನಡೆದಿದೆ.

ಮುಖ್ಯಮಂತ್ರಿ ಕಚೇರಿಯಿಂದ ಹೇಳಿಕೆ ಬಿಡುಗಡೆ
ಸುದ್ದಿ ಸಂಸ್ಥೆ ಎಎನ್‌ಐ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಜನಸಮೂಹ ಏಕಾಏಕಿ ಬಂದು ಸಿಎಂಒ ಕಚೇರಿಯ ಹೊರಗಿನಿಂದ ದಾಳಿ ಆರಂಭಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಗುಂಪಿನಲ್ಲಿದ್ದ ಕೆಲವರು ಕಚೇರಿ ಕಟ್ಟಡ ಹಾಗೂ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿ ಗೇಟ್ ಒಡೆಯಲು ಯತ್ನಿಸಿದರು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಪರಿಸ್ಥಿತಿ ಹದಗೆಟ್ಟಾಗ ಸಿಎಂ ಕಾನ್ರಾಡ್ ಸಂಗ್ಮಾ ಅವರೇ ಹಿಂಸಾಚಾರದಲ್ಲಿ ಗಾಯಗೊಂಡ ಭದ್ರತಾ ಸಿಬ್ಬಂದಿಯ ಆರೈಕೆ ಮಾಡಿದ್ದು, ಇಡೀ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದಾರೆ. ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ್ ಅಧಿಕಾರಿಯ ಹೇಳಿಕೆ
ಪೊಲೀಸ್ ಅಧಿಕಾರಿಯೊಬ್ಬರು, ಮುಖ್ಯಮಂತ್ರಿ ಮತ್ತು ಇತರ ಸಚಿವರು ಸಭೆ ನಡೆಸುತ್ತಿದ್ದಾಗ ಪ್ರತಿಭಟನಾಕಾರರು ಜಮಾಯಿಸಿ ಕಲ್ಲು ತೂರಾಟ ನಡೆಸಿದರು. ಮುಖ್ಯಮಂತ್ರಿಗಳು ಬಹಳ ಹೊತ್ತು ತಮ್ಮ ಕಚೇರಿಯಲ್ಲಿಯೇ ಇದ್ದರು. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Latest Indian news

Popular Stories