ಮಾನಸಿಕ, ದೈಹಿಕ ಮತ್ತು ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ಸಮಸ್ಯೆಯಲ್ಲಿದ್ದೇನೆ: ಜೆಡಿಎಸ್ ಮುಖಂಡ ಸಾ. ರಾ. ಮಹೇಶ್

ಮೈಸೂರು: ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸಾರಾ ಮಹೇಶ್ ಕಣಕ್ಕೆ ಇಳಿಯುತ್ತಾರೆ ಎಂಬ ಮಾತು ಕಳೆದ ನಾಲ್ಕು ದಿನಗಳಿಂದ ಕೇಳಿ ಬರುತ್ತಿತ್ತು, ಹೀಗಾಗಿ ಈ ವದಂತಿಗೆ ಖುದ್ದಾಗಿ ಸಾರಾ ಮಹೇಶ್ ಅವರೆ ತೆರೆ ಎಳೆದಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಟಿಕೆಟ್ ಆಕಾಂಕ್ಷಿಯೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಲೋಕಸಭಾ ಚುನಾವಣೆಯ ಆಕಾಂಕ್ಷಿಯಲ್ಲ ಎಂದಿದ್ದಾರೆ.

ನಾನು ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಕುಸಿದಿದ್ದೇನೆ. ನನಗೆ ರೆಸ್ಟ್ ಬೇಕಿದೆ. ಹೀಗಾಗಿ ನಾನು ಟಿಕೆಟ್ ಆಕಾಂಕ್ಷಿಯಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ವಿಧಾನಸಭಾ ಚುನಾವಣೆಯ ಸೋಲು ತಮ್ಮನ್ನು ಮಾನಸಿಕವಾಗಿ ಕುಗ್ಗಿಸಿದೆ ಎಂಬುದನ್ನು ಬಹಿರಂಗವಾಗಿಯೆ ಒಪ್ಪಿಕೊಂಡಿದ್ದಾರೆ.

ಅಷ್ಟು ಮಾತ್ರವಲ್ಲ ತಮಗೆ ಚುನಾವಣಾ ರಾಜಕೀಯವೇ ಸಾಕಾಗಿದೆ ಎಂಬ ರೀತಿ ವೈರಾಗ್ಯದ ಮಾತನ್ನು ಹೇಳಿ ಅಚ್ಚರಿ ಮೂಡಿಸಿದ್ದಾರೆ.ಇದೇ ವೇಳೆ ನರೇಂದ್ರ ಮೋದಿ ಮತ್ತೊಮ್ಮೆ ಪಿಎಂ ಆಗಬೇಕು ಎಂದಿದ್ದಾರೆ.

ಸಂಸದ ಪ್ರತಾಪ್ ಸಿಂಹ 10 ವರ್ಷ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಮುಖಂಡರು ನನ್ನ ಅಭ್ಯರ್ಥಿಯಾಗುವ ವಿಚಾರದಲ್ಲಿ ಸಂಪರ್ಕಿಸಿದ್ದಾರೆ ಎಂಬುದೆಲ್ಲಾ ಊಹಾಪೋಹ ಎನ್ನುವ ಮೂಲಕ ಪ್ರತಾಪ್ ಸಿಂಹ ಪರವೂ ಬ್ಯಾಟ್ ಬೀಸಿದ್ದಾರೆ. ಬಿಜೆಪಿ ಮುಖಂಡರೊಂದಿಗೆ 38 ವರ್ಷಗಳಿಂದಲೂ ಒಡನಾಟವಿದೆ. ಅವರ ಭೇಟಿಗೆ ಯಾವುದೇ ವಿಶೇಷ ಅರ್ಥವಿಲ್ಲ ಎಂದರು.

Latest Indian news

Popular Stories