ಅಲ್ಪಸಂಖ್ಯಾತರು ಈ ದೇಶದೊಂದಿಗೆ ಕಲ್ಲಿನಂತೆ ನಿಂತಿದ್ದಾರೆ; ಅವರು ದೇಶ ಭಕ್ತರು – ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ

ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಭಾಷಣ ಪಾರ್ಲಿಮೆಂಟ್ ನಲ್ಲಿ ನಡೆಯುತ್ತಿದ್ದು ಬಹಳಷ್ಟು ವಿಚಾರಗಳನ್ನು ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು‌ ನೀವು ಅಲ್ಪಸಂಖ್ಯಾತರನ್ನು ಹೆದರಿಸುತ್ತೀರು ಎಂದರು.

ನೀವು ಅಲ್ಪಸಂಖ್ಯಾತರಾದ ಸಿಖ್ಖ್, ಕ್ರೈಸ್ತರು ಮತ್ತು‌ಮುಸ್ಲಿಮರ ವಿರುದ್ಧ ಹಿಂಸೆ, ದ್ವೇಷ ಹರಡುತ್ತೀರಿ. ಆದರೆ ಅಲ್ಪ ಸಂಖ್ಯಾತರು ಏನು ಮಾಡಿದರು. ಅವರು ದೇಶದ ಪ್ರತಿ ಕ್ಷೇತ್ರ ಪ್ರತಿನಿಧಿಸಿ ಭಾರತ ಹೆಸರನ್ನು ಎತ್ತಿ ಹಿಡಿದಿದ್ದಾರೆ. ಕಲ್ಲಿನಂತೆ ಅವರು ಭಾರತದೊಂದಿಗೆ ನಿಂತಿದ್ದಾರೆ. ಅವರು ದೇಶಭಕ್ತರು. ಆದರೆ ನೀವು ಎಲ್ಲ‌ಅಲ್ಪಸಂಖ್ಯಾತರ ಮೇಲೆ ಆಕ್ರಮಣ ಮಾಡಿದ್ದೀರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

Latest Indian news

Popular Stories