‘ಗಗನಕ್ಕೇರುತ್ತಿರುವ’ ಬೆಲೆಗಳ ನಡುವೆ ‘ಕ್ರೋನಿ ಕ್ಯಾಪಿಟಲಿಸ್ಟ್‌ಗಳ ಲಾಭ’ದತ್ತ ಮೋದಿ ಸರ್ಕಾರ ಗಮನ – ಕಾಂಗ್ರೆಸ್

ಅಗತ್ಯ ವಸ್ತುಗಳ ಬೆಲೆ “ಗಗನಕ್ಕೇರುತ್ತಿರುವ” ಬಗ್ಗೆ ಕಾಂಗ್ರೆಸ್ ಮಂಗಳವಾರ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತು. ಸರ್ಕಾರದ ಸಂಪೂರ್ಣ ಗಮನವು ಪ್ರಧಾನಿ ನರೇಂದ್ರ ಮೋದಿಯವರ “ಇಮೇಜ್ ಉಳಿಸಲು” ಮತ್ತು “ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಲಾಭ” ಮಾಡುವಲ್ಲಿ ಇದೆ ಎಂದು ಆರೋಪಿಸಿದೆ.

ಮೋದಿ ಸರ್ಕಾರದ ಜನವಿರೋಧಿ ನೀತಿಗಳಿಂದ ಹಣದುಬ್ಬರ ಗಗನಕ್ಕೇರುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ತರಕಾರಿ, ಹಿಟ್ಟು, ಅಕ್ಕಿ, ಬೇಳೆಕಾಳುಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಒಂದೂವರೆ ತಿಂಗಳಲ್ಲಿ ‘ಥಾಲಿ’ 28 ಪ್ರತಿಶತದಷ್ಟು ದುಬಾರಿಯಾಗಿದೆ” ಎಂದು ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ

‘ತಾಲಿ’ಯ ಬೆಲೆ ಶೇಕಡಾ 28 ರಷ್ಟು ಮತ್ತು ದೈನಂದಿನ ಅಡುಗೆ ವೆಚ್ಚವು 100 ರೂಪಾಯಿಗಳವರೆಗೆ ಏರಿಕೆಯಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಎಂಎಸ್‌ಪಿ ನೀಡುವ ಭರವಸೆ ಇಂದಿಗೂ ಈಡೇರಿಲ್ಲ.ರೈತರು ಕಡಿಮೆ ಬೆಲೆಗೆ ಧಾನ್ಯಗಳನ್ನು ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ, ಆದರೆ ಕೃಷಿ ಉತ್ಪನ್ನಗಳು ಬಂಡವಾಳಶಾಹಿಗಳ ಗೋದಾಮುಗಳಿಗೆ ತಲುಪಿದ ತಕ್ಷಣ ಅವುಗಳ ಬೆಲೆ ದಿಢೀರ್ ಏರುತ್ತದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Latest Indian news

Popular Stories