ಮೋದಿ ಹವಾ ಠುಸ್ಸ್; ಮಹಾರಾಷ್ಟ್ರದಲ್ಲಿ ಮೋದಿ ಪ್ರಚಾರ ನಡೆಸಿದ ಸುಮಾರು 18 ಲೋಕಸಭಾ ಕ್ಷೇತ್ರಗಳ ಪೈಕಿ 15ರಲ್ಲಿ ಸೋಲು!

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸರಳ ಬಹುಮತ ಪಡೆದು, ನರೇಂದ್ರ ಮೋದಿ ಮೂರನೆ ಅವಧಿಗೆ ಪ್ರಧಾನಿಯಾಗುವ ಹಾದಿ ಸುಗಮವಾಗಿದ್ದರೂ ಮಹಾರಾಷ್ಟ್ರದಲ್ಲಿ ಬಿಜೆಪಿಯು ದಯನೀಯ ಪ್ರದರ್ಶನ ತೋರಿರುವುದರಿಂದ ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಎನ್‌ಡಿಎ ಮೈತ್ರಿಪಕ್ಷಗಳಲ್ಲಿ ಆತಂಕ ಮನೆ ಮಾಡಿದೆ.

2019ರ ಲೋಕಸಭಾ ಚುನಾವಣೆಯಲ್ಲಿ 23 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ, ಈ ಬಾರಿ ಕೇವಲ 9 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದಲ್ಲಿ ಎಲ್ಲಿ ಹೆಚ್ಚು ಪ್ರಚಾರ ನಡೆಸಿದ್ದರೊ, ಆ ಕ್ಷೇತ್ರಗಳಲ್ಲೇ ಬಿಜೆಪಿಗೆ ಹೆಚ್ಚು ನಷ್ಟ ಉಂಟಾಗಿದೆ. ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದ ಮಹಾರಾಷ್ಟ್ರದ ಸುಮಾರು 18 ಲೋಕಸಭಾ ಕ್ಷೇತ್ರಗಳ ಪೈಕಿ 15 ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಪರಾಭವಗೊಂಡಿರುವುದು ಚುನಾವಣಾ ಆಯೋಗದ ದತ್ತಾಂಶಗಳಿಂದ ಬಯಲಾಗಿದೆ.

Latest Indian news

Popular Stories