ಕಂಟೈನರ್‌ನಲ್ಲಿ ದುಡ್ಡು ಬಂದಿರುವುದೇ ಮಹಾರಾಷ್ಟ್ರ ದಲ್ಲಿ ಬಿಜೆಪಿ ಮೈತ್ರಿ ಗೆಲ್ಲಲು ಕಾರಣ: ಬಿ.ಕೆ. ಹರಿಪ್ರಸಾದ್

ಮಂಗಳೂರು: ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಹಣ ಹಂಚಲಾಗಿದೆ. ಹಣ ಹಂಚಲು ಕಂಟೈನರ್‌ನಲ್ಲಿ ಹಣ ಸಾಗಿಸಲಾಗಿದೆ. ಇದುವೇ ಅಲ್ಲಿ ಬಿಜೆಪಿ ಮೈತ್ರಿ ಕೂಟ ಗೆಲ್ಲಲು ಕಾರಣ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹಲವು ಚುನಾವಣೆಗಳನ್ನು ಕಂಡಿದ್ದೇನೆ. ಆದರೆ ಈ ರೀತಿಯ ಹಣದ ಹೊಳೆ ಕಂಡಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲೂ ಎಲ್ಲಾ ಪಕ್ಷಗಳು ಹಣದ ಹೊಳೆ ಹರಿಸಿದೆ. ಆದರೆ ಕೊನೆಯಲ್ಲಿ ಕಾಂಗ್ರೆಸ್‌ನ ಜನಪರ ಯೋಜನೆಗಳೇ ಪಕ್ಷವನ್ನು ಗೆಲ್ಲಿಸಿತು ಎಂದು ಅವರು ಹೇಳಿದರು.
ಬಿಎಸ್ ವಿಜಯೇಂದ್ರ ಕಾಂಗ್ರೆಸ್‌ನ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪರ ಸಹಿಯನ್ನು ತಾವೇ ಹಾಕಿದಷ್ಟು ಸುಲಭದಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕೆ ಹರೀಶ್ ಕುಮಾರ್, ಮಾಜಿ ಸಚಿವರು ಅಭಯಚಂದ್ರ ಜೈನ್, ಮಾಜಿ ಶಾಸಕರು ಜೆ ಆರ್ ಲೋಬೊ, ಕೆಪಿಸಿಸಿ ಪ್ರ. ಕಾರ್ಯದರ್ಶಿಗಳು ಮಿಥುನ್ ರೈ, ಪದ್ಮರಾಜ್ ಆರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಲುಕ್ಮನ್ ಬಂಟ್ವಾಳ್, ಮ ನ ಪಾ ಸದಸ್ಯರು ನವೀನ್ ಡಿ ಸೋಜಾ, ಜಿಲ್ಲಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿಗಳು ವಿಕಾಸ್ ಶೆಟ್ಟಿ, ಟಿ ಕೆ ಸುದೀರ್, ಚಿತ್ತರಜoನ್ ಶೆಟ್ಟಿ, ಜಿತೇಂದ್ರ ಸುವರ್ಣ, ನಿತ್ಯಾನಂದ ಶೆಟ್ಟಿ, ಸಾರಿಕಾ ಪೂಜಾರಿ, ಶರೀಫ್ ದೇರಳಕಟ್ಟೆ, ಪದ್ಮನಾಬ ಅಮೀನ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.