ಜು.22ರಿಂದ ಆ.9ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ

ನವದೆಹಲಿ: ಸಾರ್ವತ್ರಿಕ ಚುನಾವಣೆ 2024 ಮುಗಿದು ಎನ್ ಡಿಎ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಮಂತ್ರಿಮಂಡಲ ರಚನೆಯಾಗಿ ನೂತನ ಸಚಿವರಿಗೆ ಖಾತೆ ಹಂಚಿಕೆ ಕೂಡ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಪ್ರತಿವರ್ಷದಂತೆ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 22 ರಂದು ಪ್ರಾರಂಭವಾಗಲಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಬರುವ ಬಜೆಟ್ 2024-25 ನ್ನು ಅಧಿವೇಶನದ ಮೊದಲ ದಿನದಂದು ಮಂಡಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಆಗಸ್ಟ್ 9ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ಮುಂದುವರಿಯಲಿದೆ. 18ನೇ ಲೋಕಸಭೆಯ ವಿಶೇಷ 8 ದಿನಗಳ ಸಂಸತ್ ಅಧಿವೇಶನ ಇದೇ ಜೂನ್ 24 ರಂದು ಪ್ರಾರಂಭವಾಗುತ್ತದೆ. ಈ ಅಧಿವೇಶನವು ಹೊಸದಾಗಿ ಚುನಾಯಿತ ಸದಸ್ಯರ ಪ್ರಮಾಣ ವಚನ ಸ್ವೀಕಾರ, ಸ್ಪೀಕರ್ ಆಯ್ಕೆ, ರಾಷ್ಟ್ರಪತಿಗಳ ಭಾಷಣ ಮತ್ತು ನಂತರದ ಚರ್ಚೆಗಳನ್ನು ಒಳಗೊಂಡಿರುತ್ತದೆ.

ಸಂಸತ್ತಿನ ಹೊಸ ಸದಸ್ಯರು ಜೂನ್ 24 ಮತ್ತು 25 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಣಕಾಸು ಸಚಿವಾಲಯವು ಜೂನ್ 17 ರೊಳಗೆ ವಿವಿಧ ಸಚಿವಾಲಯಗಳು ಮತ್ತು ಸಂಬಂಧಪಟ್ಟವರೊಂದಿಗೆ ತನ್ನ ಪೂರ್ವ-ಸಮಾಲೋಚನೆ ಬಜೆಟ್ ಸಭೆಗಳನ್ನು ಆರಂಭಿಸುವ ನಿರೀಕ್ಷೆಯಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು 18 ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24 ರಿಂದ ಜುಲೈ 3 ರವರೆಗೆ ನಡೆಯಸಿದೆ ಎಂದಿದ್ದರು.

ಮೊದಲ ಅಧಿವೇಶನವನ್ನು ಅನಿರ್ದಿಷ್ಟವಾಗಿ ಮುಂದೂಡುವ ಸಾಧ್ಯತೆಯಿಲ್ಲ. ಆದರೆ ಎರಡನೇ ಭಾಗ ಪ್ರಾರಂಭವಾಗುವ ಮೊದಲು ವಿರಾಮ ತೆಗೆದುಕೊಳ್ಳುತ್ತದೆ. ಎರಡನೇ ಭಾಗವು 2023-24 ರ ಆರ್ಥಿಕ ವರ್ಷದ ಆರ್ಥಿಕ ಸಮೀಕ್ಷೆಯ ಪ್ರಸ್ತುತಪಡಿಸುವಿಕೆ 2025ರ ಮಾರ್ಚ್ ವರೆಗಿನ ಪೂರ್ಣ ಪ್ರಮಾಣದ ಬಜೆಟ್ ಪ್ರಾರಂಭವಾಗುತ್ತದೆ.

Latest Indian news

Popular Stories