ಸುಳ್ಳಾರೋಪ | ಹಿಂದೂ ಮೆರವಣಿಗೆ ಪ್ರಕರಣದಲ್ಲಿ ಉಗುಳಿದ್ದ ಆರೋಪದಲ್ಲಿ ಬಂಧಿತ ಮುಸ್ಲಿಂ ಯುವಕ 151 ದಿನಗಳ ನಂತರ ಜಾಮೀನಿನ ಮೇಲೆ ಬಿಡುಗಡೆ – ಬಲವಂತವಾಗಿ ಸಹಿ ಪಡೆಯಲಾಗಿತ್ತು ಎಂದ ಸಾಕ್ಷಿಗಳು

ಭೋಪಾಲ್: ಪಶ್ಚಿಮ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಜುಲೈ 19, 2023 ರಂದು, ಮುನ್ಸಿಪಲ್ ಅಧಿಕಾರಿಗಳು, ಪೊಲೀಸರೊಂದಿಗೆ ಸೇರಿ ಅಶ್ರಫ್ ಹುಸೇನ್ ಮನ್ಸೂರಿ (43) ಒಡೆತನದ ಮೂರು ಅಂತಸ್ತಿನ ಕಟ್ಟಡವನ್ನು “ಗೋವಿಂದಾ ಗೋವಿಂದಾ” ಎಂಬ ಹಿಂದೂ ಭಕ್ತಿಗೀತೆಯೊಂದಿಗೆ ನೆಲಸಮಗೊಳಿಸಿದ್ದ ಕುರಿತು ವರದಿಯಾಗಿತ್ತು.

ಇದೀಗ ಪ್ರಕರಣದಲ್ಲಿ ತಿರುವುವೊಂದು ಕಾಣಿಸಿದ್ದು ಹಿಂದೂ ಮೆರವಣಿಗೆ ಸಂದರ್ಭದಲ್ಲಿ ಉಗುಳಿದ ಪ್ರಜರಣದಲ್ಲಿ ಬಂಧಿತನಾಗಿದ್ದ ಯುವಕನಿಗೆ 151 ದಿನಗಳ ನಂತರ ಸಾಕ್ಷಿಯ ವ್ಯತಿರಿಕ್ತ ಹೇಳಿಕೆಯ ಕಾರಣಕ್ಕೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಮೂವರು ಹದಿಹರೆಯದವರು ಮನ್ಸೂರಿ ಅವರ ಕಟ್ಟಡದ ಮೇಲ್ಛಾವಣಿಯಿಂದ ಹಿಂದೂ ಧಾರ್ಮಿಕ ಮೆರವಣಿಗೆಯ ಮೇಲೆ ಉದ್ದೇಶಪೂರ್ವಕವಾಗಿ ಉಗುಳಿದ್ದಾರೆ ಎಂದು ಹಿಂದೂ ಯುವಕರ ಗುಂಪಿನ ಆರೋಪದ ನಂತರ ಮನೆಯನ್ನು ಧ್ವಂಸಗೊಳಿಸಲಾಗಿತ್ತು. ಮುಸ್ಲಿಮರು ಧಾರ್ಮಿಕ ಮೆರವಣಿಗೆಯ ಮೇಲೆ ಉಗುಳುತ್ತಾರೆ ಎಂಬ ವದಂತಿಗಳು ಹರಡುತ್ತಿದ್ದಂತೆ, ರ್ಯಾಲಿಯಲ್ಲಿ ಭಾಗವಹಿಸಿದವರು ಮನ್ಸೂರಿ ಅವರ ಕುಟುಂಬ ಮತ್ತು ಸಾಮಾನ್ಯವಾಗಿ ಮುಸ್ಲಿಮರನ್ನು ಅವಾಚ್ಯವಾಗಿ ನಿಂದಿಸಿದ್ದರು. ಸ್ಥಳೀಯ ಖರಕುವಾ ಪೊಲೀಸ್ ಠಾಣೆಯ ಹೊರಗೆ ಹಿಂದೂ ಮೂಲಭೂತವಾದಿಗಳು ಜಮಾಯಿಸಿ ತ್ವರಿತ ಕ್ರಮಕ್ಕೆ ಒತ್ತಾಯಿಸಿದರು.

ಇದೀಗ ನ್ಯಾಯಾಲಯದ ಮುಂದೆ ಸಾಕ್ಷಿಗಳು ಅವರು ಉಗುಳಿರುವುದನ್ನು ನೋಡಿಲ್ಲ ಎನ್ನುವ ಮೂಲಕ ಪ್ರಕರಣಕ್ಕೆ ತಿರುವು ಬಂದಿದ್ದು ದೂರಿಗೆ ಸಹಿ ಹಾಕುವಂತೆ ಪೊಲೀಸರು ಒತ್ತಾಯಿಸಿದ್ದಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಸುಳ್ಳಾರೋಪಕ್ಕೆ ಅಪ್ತಾಪ್ತರು ಜೈಲಿನಲ್ಲಿ ಕಳೆಯುದರೊಂದಿಗೆ ಮನೆ ಕಳೆದುಕೊಂಡಿದ್ದಾರೆ.

Latest Indian news

Popular Stories