“ಮುಸ್ಲಿಮರು ನಿಮ್ಮ ಗುಲಾಮರಲ್ಲ” : ಮಧ್ಯ ಪ್ರದೇಶ್‌ ಕಾಂಗ್ರೇಸ್‌ ಹಿಂದುತ್ವ ಕಾರ್ಡ್‌ ವಿರುದ್ಧ ಖುರೇ಼ಿಷಿ ಆಕ್ರೋಶ

ಭೋಪಾಲ್:

ಹಿರಿಯ ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ ಅವರು ತಮ್ಮದೇ ಪಕ್ಷದ ವಿರುದ್ಧ ರಂಗವನ್ನು ಅಪಸ್ವರ ಎತ್ತಿದ್ದು, ಹಿಂದುತ್ವದ ಕಾರ್ಡ್ ಅನ್ನು ಆಡುತ್ತಿರುವ ಕುರಿತು ಆಕ್ರೋಶ ಹೊರ ಹಾಕಿ “ಮುಸ್ಲಿಮರು ಅವರ ಆದೇಶದಂತೆ ವರ್ತಿಸುವ ಗುಲಾಮರಲ್ಲ” ಎಂದು ಎಚ್ಚರಿಸಿದ್ದಾರೆ.

ಉತ್ತರ ಪ್ರದೇಶದ ರಾಜ್ಯಪಾಲರಾಗಿ, ಮಧ್ಯಪ್ರದೇಶದ ಸಚಿವರಾಗಿ ಹಾಗೂ ಲೋಕಸಭೆ ಸಂಸದರಾಗಿ ಸೇವೆ ಸಲ್ಲಿಸಿರುವ 82ರ ಹರೆಯದ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ವಿದಿಶಾದಲ್ಲಿ ನಡೆದ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಅವರು ಆಕ್ರೋಶ ಹೊರ ಹಾಕಿದರು.

.

1e48hbv8

“ಮುಸ್ಲಿಮರು ಗುಲಾಮರು ಅಥವಾ ಅವರ ಆದೇಶದಂತೆ ನಡೆದುಕೊಳ್ಳುವ ಜೀತದಾಳುಗಳಲ್ಲ ಎಂಬುದನ್ನು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಅರ್ಥಮಾಡಿಕೊಳ್ಳಬೇಕು. ಪೊಲೀಸ್, ರಕ್ಷಣಾ ಪಡೆಗಳು ಮತ್ತು ಬ್ಯಾಂಕ್‌ಗಳಲ್ಲಿ ಅವರಿಗೆ ಉದ್ಯೋಗವಿಲ್ಲದಿರುವಾಗ ಅವರು ನಿಮಗೆ ಏಕೆ ಮತ ಹಾಕಬೇಕು? ಏಕೆ? ಅವರು ಬ್ಯಾಂಕ್ ಸಾಲವನ್ನು ಖಾತರಿಪಡಿಸದಿದ್ದಾಗ ಅವರು ನಿಮಗೆ ಮತ ಹಾಕುತ್ತಾರೆಯೇ?, ”ಎಂದು ಅವರು ಕೇಳಿದರು.

“ಅವರ ಅಂಗಡಿಗಳು, ಪ್ರಾರ್ಥನ ಸ್ಥಳ ಮತ್ತು ಮನೆಗಳನ್ನು ಸುಡಲಾಗುತ್ತದೆ. ಅವರ ಮಕ್ಕಳು ಅನಾಥರಾಗುತ್ತಾರೆ. ಅವರು ಸ್ವಲ್ಪ ಮಟ್ಟಿಗೆ ಸಹಿಸಿಕೊಂಡಿದ್ದಾರೆ. ಇದರರ್ಥ ಅವರು ಹೇಡಿಗಳಲ್ಲ, ಮಿತಿ ಮೀರಿದರೆ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಈಗ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ‘ಜೈ ಗಂಗಾ ಮೈಯ್ಯ’, ‘ಜೈ ನರ್ಮದಾ ಮೈಯ್ಯ’, ‘ಗರ್ವಾ ಸೇ ಕಹೋ ಹಿಂದೂ ಹೈ’ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ, ಧಾರ್ಮಿಕ ಯಾತ್ರೆಗಳನ್ನು ಕೈಗೊಳ್ಳುತ್ತಿದ್ದಾರೆ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ವಿಗ್ರಹಗಳನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದರು.

ಆದರೆ ಬಿಜೆಪಿ ಖುರೇಷಿ ಹೇಳಿಕೆಯನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡು ಕಾಂಗ್ರೇಸ್‌ ಮೇಲೆ ವಾಗ್ದಾಳಿ ನಡೆಸುತ್ತಿದೆ.

Latest Indian news

Popular Stories