ಮುಜಾಫರ್‌ನಗರದ ಅಧಿಕಾರಿಗಳು ಭಾನುವಾರ ಖುಬ್ಬಾಪುರ ಗ್ರಾಮದ ಖಾಸಗಿ ಶಾಲೆ ಮುಚ್ಚಿದ್ದಾರೆ. ಈ ವಾರದ ಆರಂಭದಲ್ಲಿ ಶಿಕ್ಷಕರ ಸೂಚನೆಯ ಮೇರೆಗೆ ಏಳು ವರ್ಷದ ಬಾಲಕನನ್ನು ಇತರ ವಿದ್ಯಾರ್ಥಿಗಳು ಥಳಿಸಿದ್ದರು.
ಶಿಕ್ಷಕಿ ತ್ರಿಪ್ತಾ ತ್ಯಾಗಿ (60) ಬಾಲಕನ ಧರ್ಮ ಉಲ್ಲೇಖಿಸಿ ಉಲ್ಲೇಖಿಸಿ “ಮಹಮ್ಮದೀಯ ಮಕ್ಕಳ” ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಹುಡುಗನನ್ನು “ಗಟ್ಟಿಯಾಗಿ” ಹೊಡೆಯುವಂತೆ ಇತರ ವಿದ್ಯಾರ್ಥಿಗಳನ್ನು ಒತ್ತಾಯಿಸಿದ್ದಳು. ಬಾಲಕ ಮಗ್ಗಿ ಹೇಳಿಲ್ಲ ಎಂದು ಈ ರೀತಿಯಾಗಿ ಥಳಿಸಲಾಯಿತು ಎಂದು ಬಾಲಕನ ಕುಟುಂಬ ತಿಳಿಸಿದೆ.
ಭಾನುವಾರ ಮೂಲ ಶಿಕ್ಷಣ ಅಧಿಕಾರಿ ಶುಭಂ ಶುಕ್ಲಾ ಅವರು, “ನಾವು ವಿಚಾರಣೆ ನಡೆಸಿದ್ದೇವೆ… ಶಾಲೆಯು ಇಲಾಖೆಯ ಮಾನದಂಡಗಳನ್ನು ಪೂರೈಸುತ್ತಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಶಾಲೆ ಸೀಲ್ ಮಾಡುವಂತೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮಗುವಿಗೆ ಹೊಡೆದ ಶಿಕ್ಷಕರಿಗೂ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ.