ಎರಡು ಅವಧಿಯಲ್ಲಿ ಹವಾ ಸೃಷ್ಟಿಸಿದ್ದ ನರೇಂದ್ರ ಮೋದಿ; ಕಾಡಿ ಬೇಡಿ ಪ್ರಧಾನಿಯಾಗಬೇಕಾದ ರಾಜಕೀಯ ಸನ್ನಿವೇಶ!

ಮೋದಿ ಹವಾ! 2014-2019 ರಲ್ಲಿ ಬಿಜೆಪಿಗೆ ಅಮೋಘ ಜಯ ತಂದುಕೊಟ್ಟು ಸ್ವಂತ ಬಲದಲ್ಲಿ ಬಿಜೆಪಿ ಸರಕಾರ ರಚಿಸಿತ್ತು. ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಕಾಡಿ ಬೇಡಿ ಪ್ರಧಾನಿಯಾಗಬೇಕಾದ ರಾಜಕೀಯ ಸನ್ನಿವೇಶ ನಿರ್ಮಾಣವಾಗಿದೆ.

ಈಗಿನ ಲೆಕ್ಕಾಚಾರದ ಪ್ರಕಾರ ಬಿಜೆಪಿ ಸ್ವಂತ ಬಲದಲ್ಲಿ ಸರಕಾರ ರಚಿಸಲು ಸಾಧ್ಯವಿಲ್ಲ. 245 ಸ್ಥಾನಗಳೊಂದಿಗೆ ಬಹುಮತದಿಂದ ದೂರ ಉಳಿದಿದೆ. ಇನ್ನು ಎನ್.ಡಿ.ಎ ಮೈತ್ರಿಕೂಟದ ಪಲ್ಟಿ ಕುಮಾರ್ ಖ್ಯಾತಿಯ ನಿತೀಶ್ ಕುಮಾರ್, ಆಂಧ್ರದ ನಾಯ್ಡು ಅವರ ಬೆಂಬಲದೊಂದಿಗೆ ಸರಕಾರ ರಚಿಸಬೇಕಾದ ಅನಿವಾರ್ಯತೆ ಈಗಿನ ಫಲಿತಾಂಶದ ಆಧಾರದಲ್ಲಿ ಅಂದಾಜಿಸಬಹುದಾಗಿದೆ‌.

ನಿತೀಶ್ ಕುಮಾರ್, ಚಂದ್ರ ಬಾಬು ನಾಯ್ಡು ಯಾವುದೇ ಸಂದರ್ಭದಲ್ಲಿ ಪಲ್ಟಿ ಹೊಡೆಯಬಹುದಾಗಿರುವುದರಿಂದ ಈ ಬಾರಿ ಅತಂತ್ರ ಸರಕಾರ ಬರುವುದು ಮಾತ್ರ ‘ಗ್ಯಾರಂಟಿ’!

Latest Indian news

Popular Stories